ಆಳಂದ: ಕರ್ನಾಟಕ ಭೀಮ ಸೇನೆ ಮಾದನ ಹಿಪ್ಪರಗಿ ವಲಯ ಘಟಕದ ಅಧ್ಯಕ್ಷರಾಗಿ ಸುನೀಲಕುಮಾರ ಕೋಚಿ ಅವರು ಆಯ್ಕೆಯಾದರು.
ಮಂಗಳವಾರ ಮಾದನ ಹಿಪ್ಪರಗಿ ಗ್ರಾಮದಲ್ಲಿ ತಾಲ್ಲೂಕಾಧ್ಯಕ್ಷ ಸಂಜುಕುಮಾರ ಬೋಸಲೆ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಮಾದನ ಹಿಪ್ಪರಗಿ ವಲಯದ ಪದಾಧಿಕಾರಿಗಳ ನೇಮಕ ಕೈಗೊಳ್ಳಲಾಯಿತು. ಶಾಂತಲಿಂಗ ( ಉಪಾಧ್ಯಕ್ಷ), ಶರಣು ಅಣಿಹೋಲ( ಪ್ರಧಾನ ಕಾರ್ಯದರ್ಶಿ), ಯಲ್ಲಾಲಿಂಗ ದೊಡ್ಡಮನಿ( ಸಂಘಟನಾ ಕಾರ್ಯದರ್ಶಿ) ಮಲ್ಲಿನಾಥ ನಡಗೇರಿ( ವಲಯ ಯುವಘಟಕದ ಅಧ್ಯಕ್ಷ), ಸಚಿನ ಹದಗಲ್ ( ಯುವಘಟಕದ ಉಪಾಧ್ಯಕ್ಷ), ಅರುಣಕುಮಾರ ಮೇಲಿನಕೇರಿ, ಶರಣಪ್ಪ ಮೇಲಿನಕೇರಿ, ಭೀಮಶಂಕರ ತಳಕೇರಿ, ಅರುಣಕುಮಾರ ಮೇಲಿನಕೇರಿ ಹಾಗೂ ಮಹೇಶ ಪೊತೆ, ಮಹಾವೀರ ಕಾಂಬಳೆ, ಅಕ್ಷಯ ಮೇಲಿನಕೇರಿ, ಪ್ರಜ್ವಲ ಡೋಲೆ, ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.