ADVERTISEMENT

ರಕ್ತದಾನ ಮಾಡಿ ಜೀವ ಉಳಿಸಿ: ಮನೋಜಕುಮಾರ ಗುರಿಕಾರ

ವಿಶ್ವ ಹಿಂದೂ ಪರಿಷತ್, ಬಜರಂಗ ದಳದಿಂದ ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 2:23 IST
Last Updated 4 ನವೆಂಬರ್ 2020, 2:23 IST
ಚಿತ್ತಾಪುರದ ಅಕ್ಕಮಹಾದೇವಿ ಮಂದಿರ ಆವರಣದಲ್ಲಿ ಮಂಗಳವಾರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅಶ್ವಥರಾಮ್ ರಾಠೋಡ್ ರಕ್ತದಾನ ಮಾಡಿದರು (ಎಡಚಿತ್ರ) ಸೇಡಂನ ನಿಸರ್ಗ ಆಸ್ಪತ್ರೆಯಲ್ಲಿ ಸೋಮವಾರ ರಕ್ತದಾನ ಶಿಬಿರ ನಡೆಯಿತು
ಚಿತ್ತಾಪುರದ ಅಕ್ಕಮಹಾದೇವಿ ಮಂದಿರ ಆವರಣದಲ್ಲಿ ಮಂಗಳವಾರ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅಶ್ವಥರಾಮ್ ರಾಠೋಡ್ ರಕ್ತದಾನ ಮಾಡಿದರು (ಎಡಚಿತ್ರ) ಸೇಡಂನ ನಿಸರ್ಗ ಆಸ್ಪತ್ರೆಯಲ್ಲಿ ಸೋಮವಾರ ರಕ್ತದಾನ ಶಿಬಿರ ನಡೆಯಿತು   

ಚಿತ್ತಾಪುರ: ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಯುವ ಜನಾಂಗ ಹಾದಿ ತಪ್ಪುತ್ತಿದೆ. ಯುವಕರು ದುಶ್ಚಟಕ್ಕೆ ಬಲಿಯಾಗದೆ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಹೇಳಿದರು.

ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಮಂಗಳವಾರ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ಜಂಟಿಯಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ರಕ್ತದಾನ ಅತ್ಯಂತ ಶ್ರೇಷ್ಟ ಕೆಲಸ. ರಕ್ತದ ಅವಶ್ಯಕತೆ ಇದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುವ ರೋಗಿಗಳಿಗೆ ತುಂಬಾ ಪ್ರಯೋಜವಾಗಿ ಜೀವ ಉಳಿಸುವ ಕೆಲಸವಾಗುತ್ತದೆ ಎಂದು ಅವರು ಹೇಳಿದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ಕಲಬುರ್ಗಿ ಎಂ.ಆರ್.ಎಂ.ಸಿ ಅಧ್ಯಯನ ಕೇಂದ್ರದ ಡಾ.ಮಮತಾ ಪಾಟೀಲ ಮಾತನಾಡಿ, ದಾನದ ಮೂಲಕ ಪಡೆಯುವ ರಕ್ತವನ್ನು ಸಂಸ್ಕರಣ ಮಾಡಿ ಬಿಳಿ ರಕ್ತ ಕಣ ಮತ್ತು ರಕ್ತದ ಪ್ಲಾಸ್ಮಾ ಎಂದು ವಿಂಗಡಿಸಲಾಗುತ್ತದೆ. ಮೂವತ್ತು ದಿನಗಳವರೆಗೆ ಅದನ್ನು ಕಾಪಾಡಲಾಗುತ್ತದೆ. ನಿಗದಿತ ಸಮಯದಲ್ಲಿ ಬಳಕೆಯಾಗದೆ ಇದ್ದರೆ ನಿರುಪಯುಕ್ತ ರಕ್ತ ಎಂದು ವಿಸರ್ಜಿಸಲಾಗುತ್ತದೆ ಎಂದು ತಿಳಿಸಿದರು.

ಪಟ್ಟಣದ ಖಾಸಗಿ ಆಸ್ಪತ್ರೆಯ ವೈದ್ಯ ತರುಣ ಟೇಕೆದಾರ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಅಶ್ವಥರಾಮ್ ರಾಠೋಡ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ವಿಶ್ವ ಹಿಂದೂ ಪರಿಸತ್ ಗೌರವಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಬಿಜೆಪಿ ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ, ಬಜರಂಗ ದಳ ತಾಲ್ಲೂಕು ಸಂಯೋಜಕ ಕಾಶಿನಾಥ ಸಂಗಾವಿ ಉಪಸ್ಥಿತರಿದ್ದರು. ನಾಗರಾಜ ತಳವಾರ ಸ್ವಾಗತಿಸಿ ನಿರೂಪಿಸಿದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಅಂಬರೀಶ ಸುಲೆಗಾಂವ, ಬಿಜೆಪಿ ಮುಖಂಡರಾದ ಬಾಲಾಜಿ ಬುರಬುರೆ, ಕೋಟೇಶ್ವರ ರೇಷ್ಮಿ, ಮೇಘರಾಜ, ಸಾಬಣ್ಣ ಪೂಜಾರಿ, ಮಲ್ಲು ಉಪ್ಪಾರ, ಕಾಶಿನಾಥ, ಮಲ್ಲಿಕಾರ್ಜುನ ಮುಗುಳನಾಗಾಂವ, ರವಿ ಪವಾರ, ಸಿದ್ದು, ಅನೀಲ್ ವಾರಿಕ್ ಪರಿಷತ್ ಸದಸ್ಯರು

ಶಿಬಿರದಲ್ಲಿ ಒಟ್ಟು 54 ಜನ ಯುವಕರು ರಕ್ತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.