ADVERTISEMENT

11ರಂದು ಮಧು ಬನಿ, ಕಾವ್ಯ ಕಂಬನಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 15:04 IST
Last Updated 8 ಅಕ್ಟೋಬರ್ 2020, 15:04 IST

ಕಲಬುರ್ಗಿ: ಬುದ್ಧಾಂಕುರ ಪ್ರಕಾಶನ ಪ್ರಕಟಿಸಿರುವ ಕವಿ ಸಂತೋಷಕುಮಾರ ಕರಹರಿ ಅವರ ‘ಮಧು ಬನಿ’ ಹನಿಗವನ ಮತ್ತು ‘ಕಾವ್ಯ ಕಂಬನಿ’ ವಿಮರ್ಶಾ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಅ. 11ರಂದು ಬೆಳಿಗ್ಗೆ 11ಗಂಟೆಗೆ ನಗರದ ಕನ್ನಡ ಭವನದ ಸುವರ್ಣ ಭವನದಲ್ಲಿ ನಡೆಯಲಿದೆ ಎಂದು ಪ್ರಕಾಶನದ ಸಲಹೆಗಾರ ಡಾ.ಗವಿಸಿದ್ಧಪ್ಪ ಪಾಟೀಲ ತಿಳಿಸಿದರು.

‘ಪಾಲಿಕೆಯ ಮಾಜಿ ಸದಸ್ಯ ರಾಜಕುಮಾರ ಕಪನೂರ ಸಮಾರಂಭ ಉದ್ಘಾಟಿಸುವರು. ಸಿಯುಕೆ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ ಪುಸ್ತಕಗಳನ್ನು ಬಿಡುಗಡೆ ಮಾಡುವರು. ಸಾಹಿತಿ ಡಾ.ಹನುಮಂತರಾವ ದೊಡ್ಡಮನಿ ಅಧ್ಯಕ್ಷತೆ ವಹಿಸುವರು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿಮರ್ಶಕ ಪ್ರೊ.ವಿಕ್ರಮ ವಿಸಾಜಿ ಕೃತಿಗಳ ಪರಿಚಯ ಮಾಡುವರು. ದಲಿತ ಬಂಡಾಯ ಸಾಹಿತಿ ಜಯದೇವಿ ಗಾಯಕವಾಡ, ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಇದೇ ಸಮಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲಬುರ್ಗಿಯ ಪ್ರಜ್ಞಾ ದೇವೇಂದ್ರಪ್ಪ ಕಪನೂರ ಮತ್ತು ಬೀದರ್ ಜಿಲ್ಲೆಯ ಸೌಮ್ಯಾ ರಾಜಕುಮಾರ ತಿರಲಾಪುರ ಹುಮನಾಬಾದ್ ಅವರನ್ನು ಸಾನ್ಮಾನಿಸಲಾಗುವುದು’ ಎಂದರು.

ADVERTISEMENT

ಸಾಹಿತಿ ಎಸ್.ಕೆ.ಬಂಧು, ಸಂತೋಷಕುಮಾರ ಕರಹರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.