ADVERTISEMENT

ಎತ್ತಿಪೋತೆ ಜಲಪಾತದಲ್ಲಿ ಈಜಲು ಹೋಗಿ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 16:00 IST
Last Updated 3 ಆಗಸ್ಟ್ 2020, 16:00 IST
ಚಿಂಚೋಳಿ ತಾಲ್ಲೂಕು ಸಂಗಾಪುರ ಬಳಿಯ ಎತ್ತಿಪೋತೆ ಜಲಪಾತದಲ್ಲಿ ಸೋಮವಾರ ಸಾವನ್ನಪ್ಪಿದ ಯುವಕಮ ಶವ ಹುಡುಕುವ ಕಾರ್ಯಾಚರಣೆ ವೀಕ್ಷಿಸುತ್ತಿರುವ ಜನ
ಚಿಂಚೋಳಿ ತಾಲ್ಲೂಕು ಸಂಗಾಪುರ ಬಳಿಯ ಎತ್ತಿಪೋತೆ ಜಲಪಾತದಲ್ಲಿ ಸೋಮವಾರ ಸಾವನ್ನಪ್ಪಿದ ಯುವಕಮ ಶವ ಹುಡುಕುವ ಕಾರ್ಯಾಚರಣೆ ವೀಕ್ಷಿಸುತ್ತಿರುವ ಜನ   

ಚಿಂಚೋಳಿ: ತಾಲ್ಲೂಕಿನ ಸಂಗಾಪುರ ರಸ್ತೆಯಲ್ಲಿ ಬರುವ ಎತ್ತಿಪೋತೆ ಜಲಪಾತ ನೋಡಲು ಬಂದಿದ್ದ ಬೀದರ್ ಜಿಲ್ಲೆಯ ಮನ್ನಳ್ಳಿಯ ಯುವಕ ಮಹಮದ್ ಮಝರುದ್ದಿನ್ (17) ಜಲಪಾತದ ಕೆಳಗೆ ಈಜಲು ಹೋಗಿ ಸೋಮವಾರ ಮಧ್ಯಾಹ್ನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಗೆಳೆಯರೊಂದಿಗೆ ಬಂದಿದ್ದ ಅವನು, ನೀರಿನಲ್ಲಿ ಈಜಲು ಮೇಲಿನಿಂದ ಹಾರಿದ್ದಾನೆ. ಆದರೆ ನೀರಿನಲ್ಲಿ ಮುಳುಗಿದವನು ಮೇಲೆ ಬಂದಿಲ್ಲ. ಇದರಿಂದ ಕುಂಚಾವರಂ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಉಪೇಂದ್ರ ಮತ್ತು ಸಿಬ್ಬಂದಿ, ಜಹೀರಾಬಾದ ಗ್ರಾಮೀಣ (ಉಕ್ಕಡ) ಪೊಲೀಸ್ ಠಾಣೆ ಅಧಿಕಾರಿಗಳು, ಚಿಂಚೋಳಿಯ ಅಗ್ನಿಶಾಮಕ ಠಾಣೆಯ ಸೂರ್ಯಕಾಂತ ಬಿರಾದಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸುಮಾರು ಮೂರು ಗಂಟೆ ಕಾರ್ಯಾಚರಣೆ ನಡೆಸಿದರು. ಸಂಜೆ 6.30ಕ್ಕೆ ಶವ ದೊರಕಿದೆ.

ಬಾಲಕನಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಎತ್ತಿಪೋತೆ ಜಲಪಾತದ ಬಳಿ ತೆಲಂಗಾಣ ಮತ್ತು ಕರ್ನಾಟಕದ ಅಪಾರ ಜನ ಜಮಾಯಿಸಿದ್ದರು. ಜಹೀರಾಬಾದ ಒಪಿ ಠಾಣೆಯಲ್ಲಿ ಅಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.