ಆಕಾಶ
ಜೇವರ್ಗಿ: ತಾಲ್ಲೂಕಿನ ನೆಲೋಗಿ ಗ್ರಾಮದಲ್ಲಿ ವಿದ್ಯುತ್ ಲೈನ್ ತಗುಲಿ ಬಾಲಕ ಆಕಾಶ ಭೀಮಾಶಂಕರ ವಡ್ಡರ್ (16) ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ನೆಲೋಗಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಹತ್ತಿರ ಶುಕ್ರವಾರ ಆಕಾಶ ಸ್ನೇಹಿತರೊಂದಿಗೆ ಹುಣಸೆ ಮರ ಹತ್ತಿ ಹಣ್ಣು ಕೀಳಲು ಹೋಗಿದ್ದಾನೆ. ಮರದ ಮೇಲೆ ವಿದ್ಯುತ್ ಲೈನ್ ಹಾಯ್ದು ಹೋಗಿದ್ದು, ತಲೆಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಬಾಲಕ ಮೃತಪಟ್ಟಿದ್ದಾನೆ.
ಮೃತ ಬಾಲಕನ ತಂದೆ ಭೀಮಾಶಂಕರ ನೆಲೋಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.