ಚಿಂಚೋಳಿ: ತಾಲ್ಲೂಕಿನಲ್ಲಿ ಮಳೆ ಮುಂದುವರಿದಿದ್ದು ಜಲಾಶಯಗಳ ನೀರು ನದಿಗೆ ಹರಿ ಬಿಟ್ಟಿರುವುದರಿಂದ ನದಿಯಲ್ಲಿ ಪ್ರವಾಹ ಉಂಟಾಗಿದೆ.
ಇದರಿಂದ ತಾಲ್ಲೂಕಿನ ತಾಜಲಾಪುರ, ಗರಕಪಳ್ಳಿ, ಬುರುಗಪಳ್ಳಿ ಸೇತುವೆಗಳು ಮುಳುಗಿವೆ. ಇದರಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು ಶಾಲೆ ಕಾಲೇಜಿಗೆ ತೆರಳುವ ಮಕ್ಕಳಿಗೆ ತೊಂದರೆಯಾಗಿದೆ.
ತಾಜಲಾಪುರ ಸೇತುವೆಯಾಗಿದ್ದು, ಗರಕಪಳ್ಳಿ ಮತ್ತು ಬುರುಗಪಳ್ಳಿ ಬ್ರಿಜ್ ಕಂ. ಬ್ಯಾರೇಜುಗಳಾಗಿವೆ. ನದಿಯಲ್ಲಿ ಸುಮಾರು 6ರಿಂದ 7ಸಾವಿರ ಕ್ಯೂಸೆಕ್ ನೀರು ಹರಿದರೆ ಸಾಕು ಈ ಸೇತುವೆಗಳು ಮುಳುಗುವುದು ಮಾಮೂಲಾಗಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ 11.9ಮಿಮೀ, ಕುಂಚಾವರಂನಲ್ಲಿ 30.4ಮಿಮೀ, ಐನಾಪುರದಲ್ಲಿ 28.5ಮಿಮೀ, ಸುಲೇಪೇಟನಲ್ಲಿ 11.6ಮಿಮೀ, ಚಿಮ್ಮನಚೋಡದಲ್ಲಿ 6ಮಿಮೀ, ಕೋಡ್ಲಿಯಲ್ಲಿ 22.6ಮಿಮೀ, ನೀಡಗುಂದಾದಲ್ಲಿ 5 ಮಿ. ಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.