ADVERTISEMENT

ಕೇಂದ್ರ ಸಂಪುಟ: ಲಿಂಗಾಯತ, ದಲಿತರಿಗೆ ಅನ್ಯಾಯ– ಬಿ.ಆರ್‌. ಪಾಟೀಲ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 31 ಮೇ 2019, 14:41 IST
Last Updated 31 ಮೇ 2019, 14:41 IST
ಬಿ.ಆರ್.ಪಾಟೀಲ
ಬಿ.ಆರ್.ಪಾಟೀಲ   

ಕಲಬುರ್ಗಿ: ‘ಕೇಂದ್ರ ಸಂಪುಟದಲ್ಲಿ ಕರ್ನಾಟಕಕ್ಕೆ ಸಾಮಾಜಿಕ ನ್ಯಾಯ ದೊರೆತಿಲ್ಲ. ಲಿಂಗಾಯತರು ಮತ್ತು ದಲಿತರಿಗೆ ಅನ್ಯಾಯ ಮಾಡಲಾಗಿದೆ’ ಎಂದು ಕಾಂಗ್ರೆಸ್‌ ಮುಖಂಡಬಿ.ಆರ್‌. ಪಾಟೀಲ ಆರೋಪಿಸಿದ್ದಾರೆ.

‘ನಮ್ಮ ರಾಜ್ಯದಲ್ಲಿ ಲಿಂಗಾಯತ ಸಮುದಾಯದ10 ಜನ ಬಿಜೆಪಿಯ ಸಂಸದರು (ಲೋಕಸಭೆ, ರಾಜ್ಯಸಭೆ) ಇದ್ದರೂ ಒಬ್ಬರನ್ನೂಸಂಪುಟ ದರ್ಜೆ ಸಚಿವರನ್ನಾಗಿ ಮಾಡಿಲ್ಲ. ಒಬ್ಬರಿಗೆ ಮಾತ್ರರಾಜ್ಯ ಸಚಿವ ಸ್ಥಾನ ನೀಡಲಾಗಿದೆ.ಕೇವಲ ನಾಲ್ಕು ಜನ ಸಂಸದರಿರುವ ಎರಡು ಸಮುದಾಯಗಳಿಗೆ ತಲಾ ಒಂದೊಂದು ಸಂಪುಟ ದರ್ಜೆ ಸ್ಥಾನ ನೀಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಬಿಜೆಪಿಯ ಹಿರಿಯ ಸಂಸದ ರಮೇಶ ಜಿಗಜಿಣಗಿ ಅವರನ್ನು ಕೈಬಿಡುವ ಮೂಲಕ ದಲಿತರಿಗೂ ಅನ್ಯಾಯ ಮಾಡಿದಂತಾಗಿದೆ. ಇದನ್ನೆಲ್ಲಾ ಗಮನಿಸಿದರೆ ಬಿಜೆಪಿ ಮತ್ತು ಸಂಘ ಪರಿವಾರದವರು ದಲಿತ ಮತ್ತು ಲಿಂಗಾಯತ ವಿರೋಧಿ ನೀತಿ ಸಾಬೀತು ಪಡಿಸಿದಂತಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರದವರು ನಂಬಿದ ವರ್ಣಾಶ್ರಮ ವ್ಯವಸ್ಥೆಯಂತೆ ನಡೆದುಕೊಳ್ಳುವ ಮೂಲಕ ತಮ್ಮ ಗೋಪ್ಯ ಕಾರ್ಯಸೂಚಿಯನ್ನು ಬಹಿರಂಗ ಪಡಿಸಿದ್ದಾರೆ’ ಎಂದು ಅವರು ಆಪಾದಿಸಿದ್ದಾರೆ.

ADVERTISEMENT

‘ಲಿಂಗಾಯತ ಸಮುದಾಯಕ್ಕೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡದಿರುವುದನ್ನುಖಂಡಿಸಿ ಸುರೇಶ ಅಂಗಡಿ ಅವರು ಕೂಡಲೇ ತಮ್ಮ ರಾಜ್ಯ ದರ್ಜೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿಯನ್ನು ಬೆಂಬಲಿಸುವ ಲಿಂಗಾಯತರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.ಲಿಂಗಾಯತರ ವಿರೋಧಿಯಾದ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.