
ಆಳಂದ: ಪಟ್ಟಣದಲ್ಲಿ ಜನವರಿ 25ರಂದು ನಡೆಯಲಿರುವ ಆಳಂದ ತಾಲ್ಲೂಕು ಮೊದಲ ಬೌದ್ಧ ಧಮ್ಮ ಸಮ್ಮೇಳನದ ಪ್ರಚಾರ ಜಾಥಾಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷ ಪ್ರಕಾಶ ಮೂಲಭಾರತಿ ಮಾತನಾಡಿ,‘ಜಗತ್ತಿನ ಮಾನವೀಯ ಮತ್ತು ಸಮಾನತೆಯ ಬೌದ್ಧ ಧಮ್ಮದ ಮೊದಲ ಸಮ್ಮೇಳನ ಆಳಂದದಲ್ಲಿ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ಈ ಸಮ್ಮೇಳನ ರಾಜ್ಯಕ್ಕೆ ದಿಕ್ಸೂಚಿಯಾಗಲಿದೆ. ಇದರ ಯಶಸ್ವಿಗೆ ಎಲ್ಲರೂ ಒಗ್ಗೂಡಿ ಪ್ರಚಾರ ಜಾಥಾ ಹಮ್ಮಿಕೊಂಡಿದ್ದೇವೆ’ ಎಂದರು.
ಸಮ್ಮೇಳನ ಸಮಿತಿ ಅಧ್ಯಕ್ಷ ಬಸವಲಿಂಗಪ್ಪ ಗಾಯಕವಾಡ ಮಾತನಾಡಿ,‘ಜ.25ರಂದು ನಡೆಯುವ ಸಮ್ಮೇಳನದ ಸಾನ್ನಿಧ್ಯವನ್ನು ಬೀದರ್‌ನ ಭಂತೆ ಧಮ್ಮಾನಂದ ವಹಿಸುವರು. ಚಾಮರಾಜನಗರದ ಭಂತೇ ಬೋಧಿದತ್ತ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸುವರು’ ಎಂದರು.
‘ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸುವರು. ಬೌದ್ಧ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ರಾಜರತ್ನ ಅಂಬೇಡ್ಕರ್, ಅಪ್ಪಗೆರೆ ಸೋಮಶೇಖರ ಮತ್ತು ಜಯದೇವಿ ಗಾಯಕವಾಡ ವಿಶೇಷ ಉಪನ್ಯಾಸ ನೀಡುವರು. ಕಲಬುರಗಿ-ಬೀದರ್-ಯಾದಗಿರಿ ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ, ಮಾಜಿ ಶಾಸಕ ಸುಭಾಷ ಗುತ್ತೇದಾರ ಸೇರಿ ಹಲವರು ಭಾಗವಹಿಸುವರು’ ಎಂದು ಹೇಳಿದರು.
‘ಅಂದು ಬೆಳಿಗ್ಗೆ 6ಕ್ಕೆ ಪಂಚಶೀಲ, ಬುದ್ಧಪೂಜೆ, ತ್ರಿಪಿಠಕ ಪಠಣ, ಧಮ್ಮ ಚರ್ಚೆ ಜರುಗಲಿದೆ. ಮಧ್ಯಾಹ್ನ 12.30ಕ್ಕೆ ಬುದ್ಧನ ಮೂರ್ತಿ ಮೆರವಣಿಗೆ, ಮಧ್ಯಾಹ್ನ 2ಕ್ಕೆ ಧಮ್ಮ ದೀಕ್ಷಾ ಕಾರ್ಯಕ್ರಮ, ಮಧ್ಯಾಹ್ನ 3ಕ್ಕೆ ಸಮ್ಮೇಳನದ ಬಹಿರಂಗ ಸಭೆ ಹಾಗೂ ಹೋರಾಟಗಾರರು, ಗ್ರಾ.ಪಂ ಅಧ್ಯಕ್ಷರ ಸನ್ಮಾನ ಕಾರ್ಯಕ್ರಮ ಜರುಗಲಿದೆ’ ಎಂದು ತಿಳಿಸಿದರು.
ಜಿ.ಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ದಯಾನಂದ ಶೇರಿಕಾರ, ಆನಂದರಾವ ಗಾಯಕವಾಡ, ಭೋಜರಾಜ ಜುಬ್ರೆ, ದತ್ತಾತ್ರೇಯ ಕುಡುಕಿ, ಚನ್ನವೀರ ಕಾಳಕಿಂಗೆ, ಮಹಾದೇವ ಕಾಂಬಳೆ, ಶ್ರೀಮಂತ ಜಿಡ್ಡೆ, ಬಾಬುರಾವ ಅರುಣೋದಯ, ಅಜಯ್, ಲಕ್ಷ್ಮಣ ಕೊಡಲ ಹಂಗರಗಾ, ಚಂದ್ರಕಾಂತ ಶೇರಿಕಾರ, ಮಹಾದೇವ ಜಿಡ್ಡೆ, ದಿಲೀಪ್ ಬಂಡಾರಿ, ರಾಮಚಂದ್ರ ತಡಕಲ್, ದತ್ತಾತ್ರೇಯ ಝಳಕಿ ಪಾಲ್ಗೊಂಡಿದ್ದರು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಚಾರ ಜಾಥಾ ಸಾಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.