ADVERTISEMENT

ಜೇವರ್ಗಿ ತಾಲೂಕಿನಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 8:30 IST
Last Updated 15 ಜನವರಿ 2026, 8:30 IST
   

ಜೇವರ್ಗಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮದರಿ ಗ್ರಾಮದ ದರ್ಗಾ ಬಳಿ ಗುರುವಾರ ಚಲಿಸುತ್ತಿದ್ದ ಬಸ್‌ನಲ್ಲಿ ಶಾರ್ಟ್ ಸರ್ಕಿಟ್‌ ಉಂಟಾಗಿ ದಿಢೀ‌ರ್ ಬೆಂಕಿ ಕಾಣಿಸಿಕೊಂಡಿದೆ. ದಟ್ಟ ಹೊಗೆ ಆವರಿಸಿದ್ದರಿಂದ ಪ್ರಯಾಣಿಕರು ಭೀತರಾಗಿದ್ದರು. ಸಮಯ ಪ್ರಜ್ಞೆ ಮೆರೆದ ಬಸ್‌ ಚಾಲಕ ಶಿವಾಜಿ, ಕೂಡಲೇ ಬಸ್‌ ರಸ್ತೆ ಬದಿಗೆ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

ಕೆಕೆಆರ್‌ಟಿಸಿ ನಿಗಮದ ಜೇವರ್ಗಿ ಬಸ್ ಘಟಕದ ಕೆಎ-32 ಎಫ್ 2246 ಸಂಖ್ಯೆಯ ಬಸ್ ಬೆಳಿಗ್ಗೆ 11 ಗಂಟೆ ಸುಮಾರಿಗೆ 50ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತು ಯನಗುಂಟಿ ಗ್ರಾಮದಿಂದ ಜೇವರ್ಗಿ ಕಡೆಗೆ ಹೊರಟ್ಟಿತ್ತು. ಮಾರ್ಗ ಮಧ್ಯದ ಮದರಿ ಗ್ರಾಮದ ಬಳಿ ಏಕಾಏಕಿ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬಸ್ ನಿಲ್ಲಿಸಿದ ಚಾಲಕ ಶಿವಾಜಿ ಅವರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ.

ಅಷ್ಟೊತ್ತಿಗೆ ಎಂಜಿನ್‌ನಲ್ಲಿ ಬೆಂಕಿ ವ್ಯಾಪಿಸಿ ದಟ್ಟ ಹೊಗೆ ಕಾಣಿಸಿದೆ. ಗ್ರಾಮಸ್ಥರು ಹಾಗೂ ಚಾಲಕ ಸೇರಿ ಎಂಜಿನ್‌ನಲ್ಲಿ ಕಾಣಿಸಿದ್ದ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಎಂಜಿನ್ ಭಾಗಶಃ ಸುಟ್ಟು ಕರಕಲಾಗಿತ್ತು.

ADVERTISEMENT

ಸ್ಥಳಕ್ಕೆ ಜೇವರ್ಗಿ ಬಸ್ ಡಿಪೊದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.