ಕಲಬುರ್ಗಿ/ಬೀದರ್: ಈಶಾನ್ಯ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಮನವಿ ಮೇರೆಗೆನೆರೆಯ ತೆಲಂಗಾಣ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸಾರಿಗೆ ನಿಗಮಗಳು ಗಡಿ ಜಿಲ್ಲೆಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿವೆ.
ಶುಕ್ರವಾರ ತೆಲಂಗಾಣದ 150, ಆಂಧ್ರಪ್ರದೇಶದ 32 ಹಾಗೂ ಮಹಾರಾಷ್ಟ್ರದ 85 ಬಸ್‌ಗಳು ಸಂಚರಿಸಿದವು.
ಈಶಾನ್ಯ ಸಾರಿಗೆ ಸಂಸ್ಥೆಯು ಕಲಬುರ್ಗಿ ಮತ್ತು ಬೀದರ್‌ಗಳಿಂದಹೈದರಾಬಾದ್‌ಗೆ ಬಸ್ ಸೇವೆ ಆರಂಭಿಸಿದೆ.
34 ಮಂದಿ ನಿವೃತ್ತ ಚಾಲಕರು ಶುಕ್ರವಾರ ಸೇವೆ ನೀಡಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಎಂ.ಕೂರ್ಮಾರಾವ್ ತಿಳಿಸಿದ್ದಾರೆ.
ಸಚಿವರ ಅಭಿನಂದನೆ: ಮುಷ್ಕರದ ಸಂದರ್ಭದಲ್ಲಿ ಕೂಡ ಕರ್ತವ್ಯಕ್ಕೆ ಹಾಜರಾಗಿ ಬಸ್ ಓಡಿಸಿದ ಕಲಬುರ್ಗಿ ವಿಭಾಗದ ಚಾಲಕ ಮಹಮದ್ ಚಾಂದ್ ಪಟೇಲ್ ಅವರನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಶುಕ್ರವಾರ ಹುಮನಾಬಾದ್ ಬಳಿ ಮಾರ್ಗ ಮಧ್ಯದಲ್ಲಿ ವಾಹನ ನಿಲ್ಲಿಸಿ ಅಭಿನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.