ADVERTISEMENT

ಕಮಲಾಪುರ ಬಸ್ ಅಪಘಾತ: 7 ಮಂದಿ ಸಜೀವ ದಹನ, ಗಾಯಾಳುಗಳಿಗೆ ಚಿಕಿತ್ಸೆ

ಆಸ್ಪತ್ರೆಗೆ ಎಸ್ಪಿ ಇಶಾ ಪಂತ್ ಭೇಟ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 8:34 IST
Last Updated 3 ಜೂನ್ 2022, 8:34 IST
ಆಸ್ಪತ್ರೆಗೆ ಇಶಾ ಪಂತ್ ಭೇಟಿ ನೀಡಿ, ಗಾಯಾಳುಗಳಿಂದ ಘಟನೆ ಕುರಿತು ಮಾಹಿತಿ ಪಡೆದರು
ಆಸ್ಪತ್ರೆಗೆ ಇಶಾ ಪಂತ್ ಭೇಟಿ ನೀಡಿ, ಗಾಯಾಳುಗಳಿಂದ ಘಟನೆ ಕುರಿತು ಮಾಹಿತಿ ಪಡೆದರು   

ಕಲಬುರಗಿ: ಕಮಲಾಪುರ ಪಟ್ಟಣ ಹೊರವಲಯದ ಚಾರ್‌ಕಮಾನ್ ಬಳಿ ಶುಕ್ರವಾರ ಬೆಳಿಗ್ಗೆ ಖಾಸಗಿ ಬಸ್‌ ಮತ್ತು ಟೆಂಪೊ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ 12 ಜನರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

'ಸಿಕಂದರಾಬಾದ್‌ನ ರಾಜೇಶ್ವರ (40), ಸ್ನೇಹಲತಾ (35), ಅರ್ಚನಾ (37), ಕಲ್ಪನಾ (38), ಮಾನಸಾ (17), ಧನು (30), ರಘು (39), ಅಮೃತ್ ಪಾಟೀಲ (40), ತರುಣ್ (19), ದಿವ್ಯಾಂಶ (8) ಮತ್ತು ಸುಧಾ ಸುರ್ವೆ (46) ಎಂಬುವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳಿಂದ ಘಟನೆ ಬಗ್ಗೆ ವಿವರಣೆ ಪಡೆದರು. ಅವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರಿಂದ ಮಾಹಿತಿ ಸಂಗ್ರಹಿಸಿದರು.

ADVERTISEMENT

'ಬಹುತೇಕ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ಇನ್ನಷ್ಟು ಮಾಹಿತಿ ಪಡೆಯಲಾಗುತ್ತಿದೆ' ಎಂದು ಇಶಾ ಪಂತ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.