
ಕಲಬುರಗಿ: ಕಟ್ಟಡ, ದಿನನಿತ್ಯದ ಬಳಕೆಗೆ ಬೇಕಾಗುವಂತಹ ಸಿಮೆಂಟ್, ಟೈಲ್ಸ್, ಕಪ್, ಸಾಸರ್‌ಗಳಾಗಲಿ, ಅಂತರಿಕ್ಷ ಯಾನಕ್ಕೆ ಬೇಕಾಗುವ ಸಿಲಿಕಾ ಟೈಲ್ಸ್‌ಗಳಾಗಲಿ, ಸ್ಟೀಲ್ ಉದ್ಯಮಕ್ಕೆ ಬೇಕಾಗುವ ಅತಿ ಉಷ್ಣ ನಿರೋಧಕ ರಿಫ್ಯಾಕ್ಟರಿ ಇಟ್ಟಿಗೆಗಳಾಗಲಿ, ಆಧುನಿಕ ಎಲೆಕ್ಟ್ರಾನಿಕ್ ಉಪಕರಣಗಳಂತಹ ಸೆಲ್ ಫೋನ್, ಲ್ಯಾಪ್‌ಟಾಪ್ ಎಲ್ಲವೂ ಸಿರಾಮಿಕ್ ವಸ್ತುಗಳೇ ಆಗಿವೆ ಎಂದು ಇಂಡಿಯನ್ ಸಿರಾಮಿಕ್ ಸೊಸೈಟಿಯ ಭಾರತದ ಉಪಾಧ್ಯಕ್ಷ, ಹೈದರಾಬಾದ್‌ನ ಬಿಎಚ್ಇಎಲ್ ಜನರಲ್ ಮ್ಯಾನೇಜರ್ ಸಿ.ಡಿ. ಮಧುಸೂದನ್ ಅಭಿಪ್ರಾಯಪಟ್ಟರು.
ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗವು ಆಯೋಜಿಸಿದ್ದ ಇಂಡಿಯನ್ ಸಿರಾಮಿಕ್ ಸೊಸೈಟಿಯ ಪಿಡಿಎ ಕಾಲೇಜು ಸ್ಟೂಡೆಂಟ್ ಚಾಪ್ಟರ್‌ನ ಉದ್ಘಾಟನೆ ಮತ್ತು ಸಿರಾಮಿಕ್ ತಂತ್ರಜ್ಞಾನದ ಇತ್ತೀಚಿನ ಅನ್ವೇಷಣೆಗಳ ಕುರಿತ ಒಂದು ದಿನದ ವಿಚಾರ ಸಂಕಿರಣದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
‘ಕಂಪ್ಯೂಟರ್‌ಗಳಲ್ಲಿನ ಕೆಪಾಸಿಟರ್, ರಿಜಿಸ್ಟರ್ಸ್, ಪಿಸೊ ಎಲೆಕ್ಟ್ರಿಕ್ ಮೆಟೀರಿಯಲ್ಸ್, ಸೆನ್ಸರ್‌ಗಳೆಲ್ಲವೂ ಸಿರಾಮಿಕ್ ವಸ್ತುಗಳೇ. ಇಂದಿನ ಅಧುನಿಕ ಜಗತ್ತಿಗೆ ಸಿರಾಮಿಕ್ ವಸ್ತುಗಳು ಅತಿ ಅಗತ್ಯ. ಆದರಿಂದ ಇವುಗಳ ತಯಾರಿಕೆಗೆ ಸಿರಾಮಿಕ್ ಎಂಜಿನಿಯರುಗಳು ಕೂಡ ಅಗತ್ಯ. ಅದಕ್ಕೆ ಸಿರಾಮಿಕ್ ಕೋರ್ಸಿನ ಬೇಡಿಕೆ ಬಹಳ ಹೆಚ್ಚಾಗಿದೆ’ ಎಂದರು.
ಕಾರ್ಬೋರಂಡಂ ಯೂನಿವರ್ಸಲ್ ಲಿಮಿಟೆಡ್ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ, ಇಂಡಿಯನ್ ಸಿರಾಮಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಶಾಮರಾವ್, ತೋರಣಗಲ್‌ನ ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪನಿಯ ಜನರಲ್ ಮ್ಯಾನೇಜರ್ ಮತ್ತು ಕಾಲೇಜಿನ ಹಳೆಯ ವಿದ್ಯಾರ್ಥಿ ಹರ್ಷ ಜೋಶಿ, ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಸಿದ್ದರಾಮ ಆರ್. ಪಾಟೀಲ, ಪ್ರಾಧ್ಯಾಪಕ ಬಾಬುರಾವ ಶೇರಿಕಾರ ಮಾತನಾಡಿದರು.
ಶಶಿಭೂಷಣ್ ಅಧ್ಯಕ್ಷರಾಗಿ, ಶೇಖರ ರಾಠೋಡ್ ಉಪಾಧ್ಯಕ್ಷರಾಗಿ, ಗುಡ್ಡಿ ಗುಪ್ತ ಕಾರ್ಯದರ್ಶಿಯಾಗಿ, ಲಿಖಿತ್ ಖಜಾಂಚಿಯಾಗಿ, ಪ್ರಜ್ವಲ್, ಅಕ್ಷತ್, ವಿನಾಯಕ ಪಾಟೀಲ, ಭರತ್ ಎಸ್.ಪಿ. ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು. ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗದ ಮುಖ್ಯಸ್ಥ ವೀರೇಶ ಮಲ್ಲಾಪುರ ಸ್ವಾಗತಿಸಿದರು. ಎಸ್.ಬಿ.ಪಾಟೀಲ ವಂದಿಸಿದರು. ಪ್ರಿಯಾಂಕ ಕಾರ್ಯಕ್ರಮ ನಿರೂಪಣೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.