ADVERTISEMENT

‘ಸಾಹಿತ್ಯ ಕ್ಷೇತ್ರದ ದೈತ್ಯ ಶಕ್ತಿ ಚೆನ್ನಣ್ಣ’

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 3:02 IST
Last Updated 25 ನವೆಂಬರ್ 2020, 3:02 IST
ಡಾ.ಚೆನ್ನಣ್ಣ ವಾಲೀಕಾರ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಡಾ.ಎಚ್.ಟಿ.ಪೋತೆ, ಸುಲಫಲಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಸಿದ್ದಮ್ಮ ವಾಲೀಕಾರ, ಎ.ಕೆ.ರಾಮೇಶ್ವರ, ಡಾ.ಸ್ವಾಮಿರಾವ ಕುಲಕರ್ಣಿ ಇತರರು ಭಾಗವಹಿಸಿದ್ದರು
ಡಾ.ಚೆನ್ನಣ್ಣ ವಾಲೀಕಾರ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಡಾ.ಎಚ್.ಟಿ.ಪೋತೆ, ಸುಲಫಲಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಸಿದ್ದಮ್ಮ ವಾಲೀಕಾರ, ಎ.ಕೆ.ರಾಮೇಶ್ವರ, ಡಾ.ಸ್ವಾಮಿರಾವ ಕುಲಕರ್ಣಿ ಇತರರು ಭಾಗವಹಿಸಿದ್ದರು   

ಕಲಬುರ್ಗಿ: ನಾಡಿನ ಸಾಹಿತ್ಯ ಕ್ಷೇತ್ರದ ದೈತ್ಯ ಶಕ್ತಿ ಡಾ.ಚೆನ್ನಣ್ಣ ವಾಲೀಕಾರ ಅವರು ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಕೃಷಿಗೈದವರು ಎಂದು ಗುಲಬರ್ಗಾ ವಿ.ವಿ. ಕಲಾ ವಿಭಾಗದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಚ್.ಟಿ.ಪೋತೆ ಅಭಿಪ್ರಾಯಪಟ್ಟರು.

ನಗರದ ಕಲಾ ಮಂಡಳದ ಸಭಾಂಗಣದಲ್ಲಿ ಹಿರಿಯ ಬಂಡಾಯ ಸಾಹಿತಿ ಡಾ.ಚೆನ್ನಣ್ಣ ವಾಲೀಕಾರ ಅವರ ಪ್ರಥಮ ಪುಣ್ಯಸ್ಮರಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚೆನ್ನಣ್ಣ ಅವರಲ್ಲಿ ತಾಯ್ತನದ ಹೃದಯವಿತ್ತು. ಮಹಿಳೆ, ಶೋಷಿತರ, ದಲಿತರ ಬಗ್ಗೆ ಅತೀವ ಕಾಳಜಿ ಹೊಂದಿದ್ದರು. ಅವರ ಸಾಹಿತ್ಯ, ಚಿಂತನೆಗಳು ನಮ್ಮ ಜೊತೆ ಇವೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದಸುಲಫಲಮಠದ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಮನುಷ್ಯನಲ್ಲಿ ಪೆಟ್ಟು ಬಿದ್ದಾಗ ಬಂಡಾಯ ಆಗುತ್ತದೆ ಎಂದು ಹೇಳಿದರು.

ADVERTISEMENT

ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ ವಹಿಸಿದ್ದರು. ಡಾ ಎಸ್.ಎಸ್. ಗುಬ್ಬಿ, ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ, ಸಿದ್ದಮ್ಮ ವಾಲೀಕಾರ ವೇದಿಕೆಯ ಮೇಲೆ ಇದ್ದರು.

ಚೆನ್ನಣ ವಾಲೀಕಾರ ಅವರ ಕುರಿತು ಸುರೇಶ ಬಡಿಗೇರ, ಪರವೀನ ಸುಲ್ತಾನಾ, ಮಂಗಲಾ ಕಪರೆ, ಬಿ.ಆರ್ ಚಾಂಬಾಳ, ಡಾ.ನಾಗಪ್ಪ ಗೋಗಿ, ರೇಣುಕಾ ಡಾಂಗೆ, ಎಚ್.ಎಸ್. ಬೇನಾಳ, ಡಿ.ಎಂ. ನದಾಫ, ಧರ್ಮಣ್ಣ ಧನ್ನಿ, ಮನೋಹರ ಮರಗುತ್ತಿ, ನಾಗಪ್ಪ ಬೆಳಮಗಿ, ಶ್ರೀಮಂತ ಅಟ್ಟೂರ ಅನೇಕರು ಕವನ ವಾಚನ ಮಾಡಿದರು.

ಕೆ.ಎಸ್. ಬಂಧು ಸ್ವಾಗತ ಮಾಡಿದರು. ರಾಜಶೇಖರ ಮಾಂಗ ನಿರೂಪಣೆ ಮಾಡಿದರು. ಸಿದ್ಧಾರ್ಥ ಚಿಮ್ಮಿ ಈದಲಾಯಿ ಸಂಗೀತ ಕಾಯಕ್ರಮ ನೀಡಿದರು. ಡಾ.ಸೂರ್ಯಕಾಂತ ಸುಜ್ಯಾತ್, ಈಶ್ವರ ಇಂಗಿನ. ಬಿ.ಎಚ್.ನಿರಗುಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.