
ಕಲಬುರಗಿ: ‘ರಸಾಯನ ವಿಜ್ಞಾನ ಪರಮಾಣುಗಳ ಆಟದಿಂದ ಹಿಡಿದು ಪ್ರಪಂಚದ ಶಾಂತಿ ಮತ್ತು ಮಾನವ ಸಂಬಂಧಗಳವರೆಗೆ ಎಲ್ಲವನ್ನೂ ಅನ್ವೇಷಿಸುತ್ತದೆ. ಅದನ್ನು ಕಲಿಯುವುದರಿಂದ ಜಗತ್ತು ಸುಧಾರಿಸುತ್ತದೆ’ ಎಂದು ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ರಾಜ್ಯಾಧ್ಯಕ್ಷ ಜಿ.ಬಿ.ಈರೇಗೌಡ ಹೇಳಿದರು.
ನಗರದ ಗುರು ನಾಗಲಿಂಗೇಶ್ವರ ಕಾಲೇಜಿನಲ್ಲಿ ನಡೆದ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ರಸಾಯನ ವಿಜ್ಞಾನ ಉಪನ್ಯಾಸಕರ ವೇದಿಕೆಯ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ‘ಇದು ವಿಜ್ಞಾನದ ಭಾಗ ಮಾತ್ರವಲ್ಲ. ಪ್ರೀತಿ, ಬದಲಾವಣೆ ಮತ್ತು ಜೀವನದ ಬಗ್ಗೆಯೂ ಮಾತನಾಡುತ್ತದೆ’ ಎಂದರು.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ವಿಭಾಗ) ಉಪನಿರ್ದೇಶಕ ಸುರೇಶ್ ಅಕ್ಕಣ್ಣ ಮಾತನಾಡಿ, ‘ಈ ಸಂಘ 25 ವರ್ಷಗಳವರೆಗೆ ನಿರಂತರವಾಗಿ ಕಾರ್ಯ ಚಟುವಟಿಕೆ ನಡೆಸುತ್ತಿರುವುದು ಶ್ಲಾಘನೀಯ. ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶ ಹೆಚ್ಚಿಸಲು ಎಲ್ಲರೂ ಶ್ರಮಿಸಬೇಕು’ ಎಂದು ಹೇಳಿದರು.
ತಿಪಟೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಿವಕುಮಾರ ಎಂ.ಡಿ., ಎಂ.ಎನ್.ಹೊಸೂರು ಮಾತನಾಡಿದರು. ರಾಜಕುಮಾರ ಬಾಸುತ್ಕರ ಅಧ್ಯಕ್ಷತೆ ವಹಿಸಿದ್ದರು.
ಪ್ರಾಚಾರ್ಯರ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಖಜೂರಿ, ಪ್ರಹ್ಲಾದ ಭುರ್ಲಿ, ನಿತೀನ್ ನಾಯಕ, ವಿಭಾಗೀಯ ಅಧ್ಯಕ್ಷ ಎಂ.ವೀರನಗೌಡ, ಶಶಿಕಾಂತ ಗುಳೇದ ಹಾಜರಿದ್ದರು.
ಪ್ರಾಚಾರ್ಯ ಶಿವರಾಜ ಶೀಲವಂತ ಸ್ವಾಗತಿಸಿದರು. ಗುರುರಾಜ ಕುಲಕರ್ಣಿ ನಿರೂಪಿಸಿದರು. ಬಸವರಾಜ ಅಂಗಡಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.