ADVERTISEMENT

‘ಚೈಲ್ಡ್‌ಲೈನ್‌ ಹೆಲ್ಪ್‌ ಡೆಸ್ಕ್‌ಗೆ ಸಹಕಾರ’

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 5:01 IST
Last Updated 15 ಫೆಬ್ರುವರಿ 2021, 5:01 IST

ವಾಡಿ:ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ರೈಲ್ವೆ ಇಲಾಖೆ ಸಚಿವಾಲಯ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಹಾಗೂರೈಲ್ವೆ ಚೈಲ್ಡ್ ಹೆಲ್ಪ್‌ ಡೆಸ್ಕ್ ಇವರ ಆಶ್ರಯದಲ್ಲಿ ವಾಡಿ (ಜಂ)ಯಲ್ಲಿ ಶನಿವಾರ ‘ಚೈಲ್ಡ್ ಹೆಲ್ಪ್ ಡೆಸ್ಕ್’ನ ಮೊದಲ ಸಭೆ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದರೈಲ್ವೆ ನಿಲ್ದಾಣದ ವ್ಯವ್ಯಸ್ಥಾಪಕಜೆ.ಎನ್.ಪರೀಡ್ ಮಾತನಾಡಿ, ‘ರೈಲ್ವೆ ಚೈಲ್ಡ್ ಲೈನ್ ಸಿಬ್ಬಂದಿಯ ಕಾರ್ಯವೈಖರಿ ಗುಣಮಟ್ಟದ್ದಾಗಿದೆ. ಸಿಬ್ಬಂದಿಗೆ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ’ ತಿಳಿಸಿದರು.

‘ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗಾಗಿ ಚೈಲ್ಡ್ ಲೈನ್–1098ರ ರಾಷ್ಟ್ರೀಯ ಉಚಿತ ಕರೆ, ಚೈಲ್ಡ್ ಲೈನ್ ಸೇವೆ’ ಕುರಿತು ನೋಡಲ್ ಕೇಂದ್ರದ ಜಿಲ್ಲಾ ಸಂಯೋಜಕ ಬಸವರಾಜ ಟೆಂಗಳಿ ವಿವರಿಸಿದರು. ಚೈಲ್ಡ್ ಲೈನ್‌ನ ನೋಡಲ್‌ ಅಧಿಕಾರಿಡಾ.ರೇಣುಕಾ ಎಸ್. ಗುಬ್ಬೆವಾಡ ಅವರು ‘ಮಕ್ಕಳ ರಕ್ಷಣೆಗಾಗಿ ರಚಿಸಿರುವ ರೈಲ್ವೆ ಎಸ್‌ಒಪಿ ಕಾರ್ಯನೀತಿ’ ಕುರಿತು ವಿವರಿಸಿದದರು.

ADVERTISEMENT

ಸಂಯೋಜಕ ಶ್ರೀಕೃಷ್ಣ ಮೇತ್ರಿ, ರೈಲ್ವೆ ಚೈಲ್ಡ್ ಹೆಲ್ಪ್ ಡೆಸ್ಕ್ ಪ್ರಾರಂಭವಾದ (2019ರ ಅಕ್ಟೋಬರ್‌) ದಿನದಿಂದ ಜನವರಿ 2021ರವರೆಗಿನ ಸುಮಾರು 64 ಪ್ರಕರಣಗಳ ವರದಿ ಮಂಡಿಸಿದರು.

ಇದರ ವ್ಯಾಪಕ ಪ್ರಚಾರಕ್ಕಾಗಿ ವಾಡಿ ರೈಲ್ವೆ ಲ್ದಾಣದಲ್ಲಿ ಧ್ವನಿವರ್ಧಕದ ಸೇವೆಗೆ ಅನುಮತಿ ನೀಡಬೇಕು, ರೈಲ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೊರರೋಗಿಗಳ (ಮಕ್ಕಳ) ವೈದ್ಯಕೀಯ ತಪಾಸಣೆಯ ಸೇವೆ, ಕೋವಿಡ್‌–19 ಹಿನ್ನೆಲೆಯಲ್ಲಿ ರೈಲ್ವೆ ಚೈಲ್ಡ್ ಲೈನ್ ಸಿಬ್ಬಂದಿಗೆ ಪಾಸ್‌ ಸೇವೆ, ಮಕ್ಕಳನ್ನು ತಂಗುದಾಣಕ್ಕೆ ಅಥವಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲು ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿಕೊಳ್ಳಲಾಯಿತು.

ಶಂಕರಲಾಲ್‌ ಲಾಹೋಟಿ,ಪ್ರಥಮ ದರ್ಜೆ ಸಹಾಯಕ ಸುಧೀರ ರೈಕೋಡ ಪಾಟೀಲ, ಶಂಕರ ಬಳ್ಳಾ, ಬಸವರಾಜ ತೆಂಗಳಿ, ಸುಂದರ ಬಿ., ಶ್ರೀಕೃಷ್ಣ ಮೆತ್ರಿ, ಆರ್‌ಎಸ್ಐ ಸಂದೀಪ್ ಪವಾರ, ರೈಲ್ವೆ ಪೊಲೀಸ್ ಸೈಫಾನಾ ಬೇಗಂ ಮತ್ತು ರೈಲ್ವೆ ಇಲಾಖೆಯ ಇನ್ನಿತರ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.