ADVERTISEMENT

ಭೂಕಂಪ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 8:25 IST
Last Updated 11 ಅಕ್ಟೋಬರ್ 2021, 8:25 IST
   

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಭೂಕಂಪನ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಬೇಕು ಮತ್ತು ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ತಾಲ್ಲೂಕಿನ ಸುಲೇಪೇಟ ಉಮ್ಮರ್ಗಾ ರಾಜ್ಯ ಹೆದ್ದಾರಿ -32 ರಲ್ಲಿ ಬರುವ ಹೊಡೇಬೀರನಹಳ್ಳಿ ಕ್ರಾಸ್ ಬಳಿ ಪ್ರತಿಭಟನೆ ಆರಂಭಿಸಿದ್ದಾರೆ.

ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದಿರುವ ಈ ಪ್ರತಿಭಟನೆಯಲ್ಲಿ ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ

ಗಡಿಕೇಶ್ವಾರ, ತೇಗಲತಿಪ್ಪಿ, ರಾಯಕೋಡ, ಕುಪನೂರ, ಹೊಡೇಬೀರನಹಳ್ಳಿ, ರಾಯಯೋಡ, ಹೊಸಳ್ಳಿಎಚ್, ಕೊರವಿ ಮತ್ತಿತರ ಗ್ರಾಮಗಳ ಜನರು ಭಾಗವಹಿಸಿದ್ದಾರೆ.

ADVERTISEMENT

ಪ್ರಮುಖರಾದ ರೇವಣಸಿದ್ದಪ್ಪ ಅಣಕಲ್, ಪ್ರಕಾಶ ರಂಗನೂರ, ನಾಗರಾಜ ಚಕ್ರವರ್ತಿ, ಚಂದ್ರಶೇಖರಯ್ಯ ಕಂಬದ, ಮಸ್ತಾನ ಅಲಿ ಪಟ್ಟೇದಾರ, ವೀರೇಶ ರೆಮ್ಮಣಿ, ಸುರೇಶ ಪಾಟೀಲ ರಾಯಕೋಡ, ಮಂಗಳಮೂರ್ತಿ, ಹಣಮಂತ ರಾವ್ ಪಾಟೀಲ, ಸಿದ್ದಲಿಂಗಪ್ಪ ಹಲಚೇರಾ, ಮಸೂದ್ ಪಟೇಲ, ಶರಣಪ್ಪ ಕುಂಬಾರ, ಚಂದ್ರಕಾಂತ ದಂಡೋತಿ.ಜಗನ್ನಾಥ ಪೂಜಾರಿ, ಉದಯಕುಮಾರ ಕಲ್ಯಾಣಶೆಟ್ಟಿ, ಧನಶೆಟ್ಟಿ ರೆಮ್ಮಣಿ, ಪ್ರಭುಲಿಂಗ ಪ್ರತಿಭಟನೆಯಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.