ಚಿಂಚೋಳಿ: ತಾಲ್ಲೂಕಿನ ವಿವಿಧೆಡೆ ಗುರುವಾರ ಮಧ್ಯಾಹ್ನ ಉತ್ತಮ ಮಳೆ ಸುರಿದಿದ್ದು, ಮಳೆಗಾಗಿ ಕಾಯುತ್ತಿದ್ದ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.
ಚಿಂಚೋಳಿ, ಚಂದಾಪುರ, ಪೋಲಕಪಳ್ಳಿ, ಅಣವಾರ, ಚಿಮ್ಮಾ ಈದಲಾಯಿ, ದೇಗಲಮಡಿ, ಐನೋಳ್ಳಿ, ಗೌಡನಹಳ್ಳಿ, ಗಾರಂಪಳ್ಳಿ, ಹೂಡದಳ್ಳಿ, ಹೊಡೇಬೀರನಹಳ್ಳಿ, ಸುಲೇಪೇಟ, ದಸ್ತಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆ ಸುರಿದಿದೆ.
ಬಿಸಿಲಿಗೆ ಬೆಳೆಗಳು ಒಣಗುತ್ತಿರುವ ಹಂತದಲ್ಲಿಯೇ ಮಳೆ ಸುರಿದಿದ್ದು ಬೆಳೆಗಳು ಚೇತರಿಸಿಕೊಳ್ಳಲಿವೆ. ಎರಡು ವಾರಗಳಿಂದ ಮಳೆಯಿಲ್ಲದ ಕಾರಣ ರೈತರು ಚಿಂತೆಗೀಡಾಗಿದ್ದರು. ಗುರುವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಬಿರುಸಿನ ಮಳೆ ಸುರಿದಿದ್ದು, ಕಬ್ಬು, ಅರಸಿನ ಹಾಗೂ ತೊಗರಿಯ ಬದುಗಳಲ್ಲಿ ಮಳೆ ನೀರು ನಿಂತಿರುವುದು ಗೋಚರಿಸಿತು.
ಉದ್ದು, ಹೆಸರು, ತೊಗರಿ, ಸೋಯಾ, ಸಜ್ಜೆ, ಕಬ್ಬು, ಅರಸಿನ ಮೊದಲಾದ ಬೆಳೆಗಳಿಗೆ ಬಲ ತುಂಬಿದೆ. ಈಗಾಗಲೇ ಹೂವು ಮೊಗ್ಗಿನ ಹಂತದಲ್ಲಿರುವ ಹೆಸರು ಬೆಳೆಗೆ ಮಳೆ ಆಪದ್ಭಾಂಧವನಾಗಿ ಪರಿಣಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.