ADVERTISEMENT

ಚಿಂಚೋಳಿ: ಕಲ್ಲು ಅಕ್ರಮ ಗಣಿಗಾರಿಕೆ ವಿರುದ್ಧ ಜೆಸ್ಕಾಂ ಸಮರ

ಮಿರಿಯಾಣ: ಕಲ್ಲುಕೊರೆಯುವ ಯಂತ್ರಗಳನ್ನು ಕ್ವಾರಿಗಳಲ್ಲಿ ನೂಕಿ, ಕಾರ್ಮಿಕರು ಪರಾರಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 15:17 IST
Last Updated 4 ಮಾರ್ಚ್ 2025, 15:17 IST
ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಬಳಿ ಕಲ್ಲುಗಣಿಗಳ ಮೇಲೆ ದಾಳಿ ಮಾಡಿದ ಜೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ ವಿದ್ಯುತ್ ಪರಿವರ್ತಕಗಳು ತುಂಬಿಕೊAಡು ವಾಹನಗಳು ಸಾಗಿದವು
ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಬಳಿ ಕಲ್ಲುಗಣಿಗಳ ಮೇಲೆ ದಾಳಿ ಮಾಡಿದ ಜೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ ವಿದ್ಯುತ್ ಪರಿವರ್ತಕಗಳು ತುಂಬಿಕೊAಡು ವಾಹನಗಳು ಸಾಗಿದವು   

ಚಿಂಚೋಳಿ(ಕಲಬುರಗಿ ಜಿಲ್ಲೆ): ಜೆಸ್ಕಾಂ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಂದಾಯ ಇಲಾಖೆಗಳಿಗೆ ತಲೆನೋವಾಗಿದ್ದ ಕಲ್ಲು ಅಕ್ರಮ ಗಣಿಗಾರಿಕೆ ವಿರುದ್ಧ ಇಲಾಖೆಗಳು ಸಮರ ಸಾರಿವೆ.

ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಜೆಸ್ಕಾಂ ಜಾಗೃತ ದಳದ ಕೇಂದ್ರ ಕಚೇರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಇದರಿಂದ ಎಚ್ಚೆತ್ತುಕೊಂಡ ಕಾರ್ಮಿಕರು ಕಲ್ಲು ಕೊರೆಯುವ ಯಂತ್ರಗಳನ್ನು ಗಣಿಹೊಂಡಗಳಲ್ಲಿ ನೂಕಿ ಪರಾರಿಯಾದರು.

ಗಣಿ ಹೊಂಡಗಳಲ್ಲಿ ಬಿದ್ದ ಯಂತ್ರಗಳನ್ನು ಅಧಿಕಾರಿಗಳಿಗೆ ತರಲು ಸಾಧ್ಯವಾಗಲಿಲ್ಲ. ಆದರೆ ಉಳಿದ ವಸ್ತುಗಳನ್ನು ಜಪ್ತಿ ಮಾಡಿದರು. ಕಲ್ಲೂರು ರೋಡ್ ಗ್ರಾಮದಲ್ಲಿ ಜಪ್ತಿ ಮಾಡಿದ್ದ ವಿದ್ಯುತ್ ಪರಿವರ್ತಕವನ್ನು ವಾಹನದಲ್ಲಿ ಹಾಕುವಾಗ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಜಾಗೃತ ದಳದ ಪೊಲೀಸರು ಮಧ್ಯ ಪ್ರವೇಶದಿಂದ ಕಾರ್ಯ ಸುಗಮವಾಗಿ ನಡೆಯಿತು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

ಮಿರಿಯಾಣ ಸುತ್ತಲೂ ತ್ರಿಫೇಸ್ ವಿದ್ಯುತ್ ದಿನದ 24 ಗಂಟೆ ನೀಡಲಾಗುತ್ತಿದೆ. ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸ್ಥಳೀಯ ಮತ್ತು ತೆಲಂಗಾಣ ಮೂಲದ ಗಣಿ ಮಾಲೀಕರು ಖಾಸಗಿಯಾಗಿ ದೊರೆಯುವ ವಿದ್ಯುತ್ ಪರಿವರ್ತಕ, ತಂತಿ ಹಾಗೂ ವಿವಿಧ ಉಪಕರಣಗಳನ್ನು ತಂದು ಕಳ್ಳತನದಿಂದ ವಿದ್ಯುತ್ ಸಂಪರ್ಕ ಪಡೆದು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರು ಎನ್ನಲಾಗಿದೆ.

ಇಲ್ಲಿ ಸರ್ಕಾರಿ ಹಾಗೂ ಪಟ್ಟಾ ಜಮೀನು, ರಸ್ತೆ, ನಾಲಾ, ತೊರೆಗಳ ಜಮೀನು ಸೇರಿದಂತೆ ಎಲ್ಲೆಂದರಲ್ಲಿ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ. ಇಲ್ಲಿ 100X100 (10 ಸಾವಿರ ಚದರ ಅಡಿ) ಅಳತೆಯ ಜಾಗದಲ್ಲಿ ಗಣಿಗಾರಿಕೆ ನಡೆಸಬೇಕಾದರೆ ₹ 40-45 ಲಕ್ಷ ಜಮೀನಿನ ಮಾಲೀಕನಿಗೆ ಕೊಡಲಾಗುತ್ತಿದೆ. ಹೀಗಾಗಿ ಸರ್ಕಾರಿ ಜಮೀನನ್ನು ಎಲ್ಲೆಂದರಲ್ಲಿ ಅಗೆದು ಲೂಟಿ ಮಾಡಲಾಗಿದೆ.

ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಬಳಿ ಕಲ್ಲುಗಣಿಗಳ ಮೇಲೆ ದಾಳಿ ಮಾಡಿದ ಜೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ ವಿದ್ಯುತ್ ಪರಿವರ್ತಕಗಳು ತುಂಬಿಕೊAಡು ವಾಹನಗಳು ಸಾಗಿದವು
ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಬಳಿ ಕಲ್ಲುಗಣಿಗಳ ಮೇಲೆ ದಾಳಿ ಮಾಡಿದ ಜೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಮಂಗಳವಾರ ಜಪ್ತಿ ಮಾಡಿದ ಕಲ್ಲು ಕೊಯ್ಯುವ ಯಂತ್ರಗಳು
ಚಿAಚೋಳಿ ತಾಲ್ಲೂಕಿನ ಮಿರಿಯಾಣ ಬಳಿ ಕಲ್ಲುಗಣಿಗಳ ಮೇಲೆ ಜೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ದಾಳಿ ನಡೆಸಿದರು
ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ನಿರಂತರ ದೂರು ಗಣಿಮತ್ತು ಭೂ ವಿಜ್ಞಾನ ಇಲಾಖೆಯಿಂದ ನ್ಯಾಯಾಲಯಕ್ಕೆ ಖಾಸಗಿ ದೂರು

19 ಟೀಸಿ 8 ಯಂತ್ರಗಳು ಟನ್‌ನಷ್ಟು ವಿದ್ಯುತ್ ತಂತಿ ಜಪ್ತಿ

ಮಿರಿಯಾಣ ಕಿಸ್ಟಾಪುರ ಭೈರಂಪಳ್ಳಿ ಹೂವಿನತೋಟ ಮತ್ತು ಕಲ್ಲೂರು ರೋಡ್ ಗ್ರಾಮಗಳಲ್ಲಿ ನಡೆದ ದಾಳಿಯಲ್ಲಿ 19 ವಿದ್ಯುತ್ ಪರಿವರ್ತಕಗಳು 8 ಕಲ್ಲು ಕೊಯ್ಯುವ ಯಂತ್ರೋಪಕರಣಗಳು ಅಂದಾಜು ಟನ್‌ನಷ್ಟು ವಿದ್ಯುತ್ ತಂತಿ ಸೇರಿದಂತೆ ಮತ್ತಿತರ ಉಪಕರಣಗಳನ್ನು ಜಪ್ತಿ ಮಾಡಿದ್ದಾರೆ. ಒಂದು ಮಿನಿ ಲಾರಿ ಮೂರು ಬೊಲೆರೊ ಪಿಕ್ ಅಪ್ ಮಾದರಿಯ ವಾಹನಗಳಲ್ಲಿ ಜಪ್ತಿ ಮಾಡಿದ ವಸ್ತುಗಳನ್ನು ಕಲಬುರಗಿಗೆ ಸಾಗಿಸಲಾಯಿತು. ಕಲಬುರಗಿ ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಜೆಸ್ಕಾಂ ಜಾಗೃತ ದಳದ ಕೇಂದ್ರ ಕಚೇರಿಯ ಡಿವೈಎಸ್‌ಪಿ ಶರಣಬಸಪ್ಪ ಸುಬೇದಾರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಧ್ರುವತಾರಾ ಶ್ರೀಕಾಂತ ಅಲ್ಲಾಪುರ ಭೀಮರತ್ನ ಸಜ್ಜನ ಹಾಗೂ ಜಾಗೃತ ದಳದ ಇಇ ಸುಜಿತ ಕುಮಾರ ಎಇಇ ಲತಾ ಹಾಗೂ ರವೀಂದ್ರ ಜಗ್ಗಲ್ ಮತ್ತು ಜೆಸ್ಕಾಂ ಇಇ ಪರಮೇಶ್ವರ ಬಿರಾದಾರ ಎಇಇ ಕಾಮಣ್ಣ ಇಂಜಳ್ಳಿ ಸೇಡಂನ ಎಇಇ ಬಾಬ್ರುದ್ದೀನ್‌ ಎಂಆರ್‌ಟಿ ಎಇಇ ವಿದ್ಯಾಸಾಗರ ಸೇರಿದಂತೆ ಪೊಲೀಸ್ ಅಧಿಕಾರಿಗಳು ಜೆಸ್ಕಾಂ ಸೇಡಂ ವಿಭಾಗ ವ್ಯಾಪ್ತಿಯ ಎಲ್ಲಾ ಉಪ ಕೇಂದ್ರಗಳ ಸಿಬ್ಬಂದಿ ಪಾಲ್ಗೊಂಡಿದ್ದರು. ಜಪ್ತಿಯಾದ ಎಲ್ಲ ವಸ್ತುಗಳು ಯಂತ್ರಗಳು ಮತ್ತು ಟೀಸಿಗಳನ್ನು ಜೆಸ್ಕಾಂ ಜಾಗೃತ ದಳದ ಠಾಣೆಗೆ ಕೊಂಡೊಯ್ಯಲಾಗಿದೆ. ಜೆಸ್ಕಾಂ ಜಾಗೃತ ದಳದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿದೆ. ಇಲ್ಲಿ ಅಕ್ರಮ ಗಣಿಗಾರಿಕೆ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದೆ. ಅಕ್ರಮ ಗಣಿಗಾರಿಕೆ ಕುರಿತು ಪ್ರಜಾವಾಣಿ ಜ. 9 ಮತ್ತು ಜ. 14ರಂದು ವಿಶೇಷ ವರದಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.