ADVERTISEMENT

ಚಿಂಚೋಳಿ: ಮೈಕೊರೆಯುವ ಚಳಿಗೆ ಜನರ ತತ್ತರ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 15:53 IST
Last Updated 16 ಡಿಸೆಂಬರ್ 2023, 15:53 IST
ಚಿಂಚೋಳಿ ತಾಲ್ಲೂಕಿನ ಹೇಮ್ಲಾನಾಯಕ ತಾಂಡಾದಲ್ಲಿ ಜನರು ಚಳಿ ಹಾಗೂ ಶೀತಗಾಳಿಯಿಂದ ರಕ್ಷಿಸಿಕೊಳ್ಳಲು ಕಸಕಡ್ಡಿಗೆ ಬೆಂಕಿ ಹಚ್ಚಿ ದೇಹ ಕಾಯಿಸಿಕೊಳ್ಳುತ್ತಿರುವುದು
ಚಿಂಚೋಳಿ ತಾಲ್ಲೂಕಿನ ಹೇಮ್ಲಾನಾಯಕ ತಾಂಡಾದಲ್ಲಿ ಜನರು ಚಳಿ ಹಾಗೂ ಶೀತಗಾಳಿಯಿಂದ ರಕ್ಷಿಸಿಕೊಳ್ಳಲು ಕಸಕಡ್ಡಿಗೆ ಬೆಂಕಿ ಹಚ್ಚಿ ದೇಹ ಕಾಯಿಸಿಕೊಳ್ಳುತ್ತಿರುವುದು   

ಚಿಂಚೋಳಿ: ತಾಲ್ಲೂಕಿನಲ್ಲಿ ಕಳೆದ ಒಂದು ವಾರದಿಂದ ಮೈಕೊರೆಯುವ ಚಳಿ ಪ್ರಾರಂಭವಾಗಿದ್ದು ಜನ ಜೀವನ ಅಸ್ತವ್ಯಸ್ತಗೊಳಿಸಿದೆ. ತಾಲ್ಲೂಕಿನಲ್ಲಿ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಚಳಿ ಹಾಗೂ ಥಂಡಿಗಾಳಿಯಿಂದ ವಯೋವೃದ್ಧರು ಮನೆಯಿಂದ ಹೊರ ಬರುತ್ತಿಲ್ಲ. ವಯಸ್ಕರು ಉಣ್ಣೆ ಬಟ್ಟೆ ಧರಿಸಿದರೆ ಮಕ್ಕಳು ಕೂಡ ಸ್ವೇಟರ್ ಮೊರೆ ಹೋಗಿದ್ದಾರೆ.
ಶಾಲೆಗಳಿಗೆ ತೆರಳುವ ಮಕ್ಕಳು ಕೂಡ ಸ್ವೇಟರ್ ಧರಿಸಿ ಹೋಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ  ಬೆಂಕಿ ಹಚ್ಚಿ ದೇಹ ಕಾವು ಮಾಡಿಕೊಳ್ಳುತ್ತಿದ್ದಾರೆ.
ರಾತ್ರಿ 11 ಗಂಟೆಯಿಂದ ಬೆಳಗಿನ 6 ಗಂಟೆಗೆ ತಾಪಮಾನ ಕ್ಷೀಣಿಸುತ್ತಿದೆ. ಹಗಲಿನಲ್ಲಿ ಸೂರ್ಯನ ಶಾಖ ಹಿತವೆನಿಸುತ್ತಿದ್ದು ಬಹುತೇಕ ಜನರು ಸೂರ್ಯ ಬರುವಿಕೆಗೆ ಕಾಯುವಂತಾಗಿದೆ.

ಕಳೆದ ಒಂದು ವಾರದಿಂದ ಚಳಿ ಹೆಚ್ಚಾಗಿದೆ. ಜನರು ದೇಹ ಬಿಸಿ ಮಾಡಿಕೊಳ್ಳಲು ಬೆಂಕಿಯ ಮೊರೆ ಹೋಗುತ್ತಿದ್ದಾರೆ ಎಂದು ಗಡಿಲಿಂಗದಳ್ಳಿಯ  ಹೇಮ್ಲಾ ನಾಯಕ ತಾಂಡಾದ ಮುಖಂಡ ವಿಜಯಕುಮಾರ ಜಾಧವ ಹೇಳುತ್ತಾರೆ.

ADVERTISEMENT

ತಾಲ್ಲೂಕಿನಲ್ಲಿ ಚಂದ್ರಂಪಳ್ಳಿ ಜಲಾಶಯದ ನೀರು ಅಚ್ಚುಕಟ್ಟು ಪ್ರದೇಶಕ್ಕೆ ಹರಿದಿದಾಗ ಚಳಿ ಹೆಚ್ಚಾಗಿರುತ್ತದೆ. ಪ್ರಸಕ್ತ ವರ್ಷ ಕಳೆದ ತಿಂಗಳು ರೈತರ ಹೊಲಗಳಿಗೆ ನೀರು ಬಿಡಲಾಗಿದೆ. ಆದರೆ ಚಳಿ ಮಾತ್ರ ಕಳೆದ ಐದು ದಿನಗಳಿಂದ ಹೆಚ್ಚಾಗಿ ಜನರನ್ನು ಬಾಧಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.