ADVERTISEMENT

ಕಿರುಕುಳಕ್ಕೆ ಕಾನ್‌ಸ್ಟೆಬಲ್‌ ಪತ್ನಿ ಬಲಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 11:03 IST
Last Updated 4 ನವೆಂಬರ್ 2019, 11:03 IST
   

ಕಲಬುರಗಿ: ಪೊಲೀಸ್ ಕಾನ್‌ಸ್ಟೆಬಲ್‌ ಆಗಿರುವ ಪತಿಯ ಕಿರುಕುಳ ತಾಳದೇ ಪತ್ನಿಯೊಬ್ಬಳು ಸಣ್ಣೂರ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೀಲಾಬಾಯಿ ಚಿನ್ನಾರಾಠೋಡ್ (28) ಸಾವಿಗೆ ಶರಣಾದವರು. ಸುಭಾಷ್ ಎಂಬುವವರುಮಾಡಬೂಳ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿದ್ದು ಸಣ್ಣೂರದಲ್ಲಿ ವಾಸವಾಗಿದ್ದರು. ವಿನಾಕಾರಣ ನಿತ್ಯ ಪತ್ನಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಕಳೆದ 29ರಂದು ಮನೆಯಲ್ಲಿ ವಿಷ ಸೇವಿಸಿದ್ದರು. ನಗರದ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಶನಿವಾರ ಕೊನೆಯುಸಿರೆಳೆದಿದ್ದಾಳೆ. ನೀಲಾಬಾಯಿ ವಿಷ ಸೇವಿಸಿದ ಮಾರನೇ ದಿನದಿಂದ ಸುಭಾಷ್ ನಾಪತ್ತೆಯಾಗಿದ್ದಾನೆಎಂದು ದೂರು ದಾಖಲಾಗಿದೆ. ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT