ಕಲಬುರಗಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಸತತ 3ನೇ ದಿನವೂ ಮಳೆ ಮುಂದುವರಿದಿದೆ.
ಕಲಬುರಗಿ ನಗರ, ಜಿಲ್ಲೆಯ ಕಾಳಗಿ, ಜೇವರ್ಗಿ, ಚಿತ್ತಾಪುರ ತಾಲ್ಲೂಕಿನ ಹಲವೆಡೆ ಬಿರುಸಿನ ಮಳೆ ಸುರಿಯಿತು.
ಬೀದರ್ ನಗರ, ಗ್ರಾಮೀಣ ಭಾಗ, ಬೀದರ್, ಹುಲಸೂರ, ಭಾಲ್ಕಿ, ಹುಮನಾಬಾದ್, ಚಿಟಗುಪ್ಪ ತಾಲ್ಲೂಕು ವ್ಯಾಪ್ತಿಯಲ್ಲೂ ಮಳೆ ಬಿದ್ದಿದೆ.
ಯಾದಗಿರಿ, ಶಹಾಪುರ, ಸುರಪುರ, ಕೆಂಭಾವಿ, ವಡಗೇರಾ, ಗುರುಮಠಕಲ್, ಹುಣಸಗಿ, ಕೊಪ್ಪಳ, ರಾಯಚೂರು ಜಿಲ್ಲೆಯ ದೇವದುರ್ಗ, ಮಾನ್ವಿ ಹಾಗೂ ಸಿರವಾರದಲ್ಲಿ ವರ್ಷಧಾರೆಯಾಗಿದೆ.
ಧಾರವಾಡ, ಬೆಳಗಾವಿ ಜಿಲ್ಲೆಯಲ್ಲೂ ಮಳೆ
ಹುಬ್ಬಳ್ಳಿ ವರದಿ: ನಗರ, ಗ್ರಾಮೀಣ ಪ್ರದೇಶ, ಧಾರವಾಡದಲ್ಲಿ ಮಳೆ ಬಿದ್ದಿದೆ. ಕೆಎಂಸಿ–ಆರ್‌ಐ ಆಸ್ಪತ್ರೆಯ ಬಿಆರ್‌ಟಿ ಎಸ್ ಬಸ್ ನಿಲ್ದಾಣದ ಕಾರಿಡಾರ್ ಜಲಾವೃತಗೊಂಡಿತ್ತು. ಬೆಳಗಾವಿ ನಗರ, ತಾಲ್ಲೂಕಿನಲ್ಲಿ ಮಳೆ ಸುರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.