ADVERTISEMENT

ಕಲಬುರ್ಗಿ | ಮತ್ತೆ 10 ಜನರಿಗೆ ಕೋವಿಡ್; ಸೋಂಕಿತರ ಸಂಖ್ಯೆ 104ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 17 ಮೇ 2020, 8:28 IST
Last Updated 17 ಮೇ 2020, 8:28 IST
   

ಕಲಬುರ್ಗಿ: ಜಿಲ್ಲೆಯಲ್ಲಿ ‌ಭಾನುವಾರ ಮತ್ತೆ 10 ಜನರಲ್ಲಿ ಕೋವಿಡ್- 19 ಸೋಂಕು ಪತ್ತೆಯಾಗಿದೆ. ಅವರ ಪೈಕಿ 6 ಜನರು ಮಹಾರಾಷ್ಟ್ರದ ಮುಂಬೈ ಹಾಗೂ ಥಾಣೆಯಿಂದ ಜಿಲ್ಲೆಗೆ ವಾಪಸಾಗಿದ್ದರು.

ಇಬ್ಬರಿಗೆ ರೋಗಿ ಸಂಖ್ಯೆ 927ನೇಯವರಿಂದ ಸೋಂಕು ಹರಡಿದೆ. ಮತ್ತೊಬ್ಬರಿಗೆ ಕಲಬುರ್ಗಿಯ ಕಂಟೋನ್ಮೆಂಟ್ ‌ಝೋನ್ ನಲ್ಲಿ ವಾಸವಾಗಿದ್ದರಿಂದ ಕೋವಿಡ್‌ ಅಂಟಿಕೊಂಡಿದೆ. ಮತ್ತೊಬ್ಬರ ಸಂಪರ್ಕವನ್ನು ‌ಪತ್ತೆ ಹಚ್ಚಲಾಗುತ್ತಿದೆ.

ಸೋಂಕಿತರಲ್ಲಿ ಮೂವರು ಬಾಲಕರು, ಐವರು ಪುರುಷರು, ಇಬ್ಬರು ಮಹಿಳೆಯರು ಸೇರಿದ್ದಾರೆ.ಶನಿವಾರವೂ ಜಿಲ್ಲೆಯಲ್ಲಿ 9 ಜನರಲ್ಲಿ ಕೋವಿಡ್ ಪತ್ತೆಯಾಗಿತ್ತು.

ADVERTISEMENT

ಬೇರೆ ರಾಜ್ಯಗಳಿಂದ ವಾಪಸಾದ ಜಿಲ್ಲೆಯ ಕಾರ್ಮಿಕರನ್ನು 294 ಸ್ಥಳಗಳಲ್ಲಿ ಕ್ವಾರಂಟೈನ್ ‌ಮಾಡಲಾಗಿದೆ. ಸುಮಾರು 15 ಸಾವಿರಕ್ಕೂ ಅಧಿಕ ಕಾರ್ಮಿಕರು ಇಲ್ಲಿಯವರೆಗೆ ಜಿಲ್ಲೆಗೆ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.