ADVERTISEMENT

ಕಲಬುರ್ಗಿ | ಮೃತ ವೃದ್ಧನ ಕುಟುಂಬ ಸದಸ್ಯರೊಬ್ಬರಿಗೆ ಕೊರೊನಾ ಸೋಂಕು ಪತ್ತೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 16:09 IST
Last Updated 15 ಮಾರ್ಚ್ 2020, 16:09 IST
ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕಲಬುರ್ಗಿ ಜಿಲ್ಲೆಯಾದ್ಯಂತ ವಾಣಿಜ್ಯ ಮಳಿಗೆಗಳು, ವ್ಯಾಪಾರ ವಹಿವಾಟುಗಳನ್ನು ಜಿಲ್ಲಾಡಳಿತ ಬಂದ್‌ ಮಾಡಿದ್ದರಿಂದ ಶರಣಬಸವೇಶ್ವರ ಜಾತ್ರೆಯ ಅಂಗವಾಗಿ ಹಾಕಿದ್ದ ಮಿಠಾಯಿ ಅಂಗಡಿ ಬಳಿ ಭಾನುವಾರ ಗಿರಾಕಿಗಳೇ ಇರಲಿಲ್ಲ.
ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕಲಬುರ್ಗಿ ಜಿಲ್ಲೆಯಾದ್ಯಂತ ವಾಣಿಜ್ಯ ಮಳಿಗೆಗಳು, ವ್ಯಾಪಾರ ವಹಿವಾಟುಗಳನ್ನು ಜಿಲ್ಲಾಡಳಿತ ಬಂದ್‌ ಮಾಡಿದ್ದರಿಂದ ಶರಣಬಸವೇಶ್ವರ ಜಾತ್ರೆಯ ಅಂಗವಾಗಿ ಹಾಕಿದ್ದ ಮಿಠಾಯಿ ಅಂಗಡಿ ಬಳಿ ಭಾನುವಾರ ಗಿರಾಕಿಗಳೇ ಇರಲಿಲ್ಲ.   

ಕಲಬುರ್ಗಿ: ಕಳೆದ ಮಾ 10ರಂದು ನಿಧನರಾದ ನಗರದ ವೃದ್ಧ ಮೊಹಮ್ಮದ್‌ ಹುಸೇನ್‌ ಸಿದ್ದಿಕಿ (76) ಅವರ ಕುಟುಂಬ ಸದಸ್ಯರೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಅವರ ಕುಟುಂಬದ ನಾಲ್ವರು ಸದಸ್ಯರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಮೂವರಿಗೆ ಸೋಂಕು ಇಲ್ಲ ಎಂಬ ವರದಿ ಶನಿವಾರವೇ ಬಂದಿತ್ತು. ಭಾನುವಾರ ಮತ್ತೊಬ್ಬ ಸದಸ್ಯರ ವರದಿ ಬಂದಿದ್ದು, ಅವರಿಗೂ ಕೊರೊನಾ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

ನಾಲ್ವರನ್ನೂ ಸದ್ಯ ಇಎಸ್‌ಐ ಆಸ್ಪತ್ರೆಯ ವಿಶೇಷ ವಾರ್ಡ್‌ನಲ್ಲಿ ಇರಿಸಲಾಗಿದೆ. ಅಲ್ಲದೇ, ಅವರೊಂದಿಗೆ ಒಡನಾಟ ಹೊಂದಿದ್ದ ಹಾಗೂ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ 67 ಜನರನ್ನು ಮನೆಯಲ್ಲೇ ಉಳಿಸಿ (ಐಸೋಲೇಶನ್‌) ನಿಗಾ ವಹಿಸಲಾಗಿದೆ.

ADVERTISEMENT

ಮುನ್ನೆಚ್ಚರಿಕೆ ಕ್ರಮವಾಗಿ ನಗರದ ಎಲ್ಲ ವಾಣಿಜ್ಯ ಮಳಿಗೆಗಳನ್ನು ಬಂದ್‌ ಮಾಡಲಾಗಿದೆ. ಹೆಚ್ಚು ಜನ ಸೇರುವ ಎಲ್ಲ ಜಾತ್ರೆ, ಉರುಸ್‌ಗಳನ್ನು ರದ್ದು ಮಾಡಲಾಗಿದ್ದು, ಸಾರ್ವಜನಿಕ ಉದ್ಯಾನಗಳನ್ನೂ ಬಂದ್‌ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.