ADVERTISEMENT

ಕಲಬುರ್ಗಿಯಲ್ಲಿ ಕೋವಿಡ್‌ಗೆ ವೃದ್ಧ ಸಾವು: 151 ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 3:13 IST
Last Updated 4 ಏಪ್ರಿಲ್ 2021, 3:13 IST

ಕಲಬುರ್ಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ಒಬ್ಬ ವೃದ್ಧ ನಿಧನರಾಗಿದ್ದಾರೆ ಎಂದು ಶನಿವಾರದ ಅರೋಗ್ಯ ಬುಲೆಟಿನ್ ತಿಳಿಸಿದೆ.ಇದರಿಂದ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿನಿಂದ ಮೃತಪಟ್ಟವರ ಸಂಕ್ಯೆ 346ಕ್ಕೆ ಏರಿಕೆಯಾಗಿದೆ.

ಸಾರಿ ಹಿನ್ನೆಲೆಯಿಂದ ಕಲಬುರಗಿಯ ಕೆ.ಬಿ.ಎನ್ ಎಂಜಿನೀಯರಿಂಗ್‌ ಕಾಲೇಜು ಸಮೀಪದ ಬಿಲಾಲಾಬಾದ್‌ ಪ್ರದೇಶದ 85 ವರ್ಷದ ವೃದ್ಧ ಮಾರ್ಚ್‌ 26ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದರು. ಏ. 2ರಂದು ನಿಧನ ಹೊಂದಿದ್ದಾರೆ.

ಶನಿವಾರ ಮತ್ತೆ 151 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ಅಂಟಿಕೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 24,369ಕ್ಕೆ ಏರಿದೆ.‌ 93 ಮಂದಿ ಗುಣಮುಖರಾದ ಮರಳಿದ್ದಾರೆ. ಗುಣಮುಖರಾದವರ ಸಂಖ್ಯೆ 22751ಕ್ಕೆ ಏರಿಕೆಯಾಗಿದೆ.

ADVERTISEMENT

ಇನ್ನೂ 1272 ಸಕ್ರಿಯ ಪ್ರಕರಣಗಳು ಇವೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.