ಸಾಂದರ್ಭಿಕ ಚಿತ್ರ
ಕಮಲಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕುರಿಕೋಟಾ ಸೇತುವೆ ಮೇಲಿಂದ ಸೋಮವಾರ ಬೆಣ್ಣೆತೊರೆ ಜಲಾಶಯದ ಹಿನ್ನಿರಿಗೆ ಯುವಕ ಮತ್ತು ಯುವತಿ ಹಾರಿದ್ದು, ಯುವಕನ ಶವ ಪತ್ತೆಯಾಗಿದ್ದು, ಯುವತಿಗಾಗಿ ಹುಡುಕಾಟ ನಡೆದಿದೆ.
ಕಮಲಾಪುರ ತಾಲ್ಲೂಕಿನ ಮುದ್ದಡಗಾ ಗ್ರಾಮದ ಅನೀಲಕುಮಾರ ಸಿದ್ಧಾರೂಢ ಮೂಲಗೆ (27) ಮೃತ ಯುವಕ. ಯುವತಿ ಹೆಸರು ಸಂಧ್ಯಾರಾಣಿ ಎಂಬುದಾಗಿ ತಿಳಿದು ಬಂದಿದೆ.
ಸ್ಥಳೀಯ ಮೀನುಗಾರರು ಈಜುಪಟುಗಳು ಯುವಕ ಅನಿಲಕುಮಾರ ಮೃತದೇಹ ಹೊರ ತೆಗೆದಿದ್ದಾರೆ. ಯುವತಿಗಾಗಿ ಶೋಧ ಕಾರ್ಯ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.