ADVERTISEMENT

ಕಲಬುರ್ಗಿ: ಜಿಲ್ಲೆಯಲ್ಲಿ ಕೊರೊನಾದಿಂದ ಈವರೆಗೆ 517 ಮಂದಿ ಸಾವು

ಸೋಂಕಿನಿಂದಾಗಿ ಮತ್ತೆ 14 ಮಂದಿಗೆ ನಿಧನ, 1652 ಮಂದಿಗೆ ಪಾಸಿಟಿವ್‌

​ಪ್ರಜಾವಾಣಿ ವಾರ್ತೆ
Published 7 ಮೇ 2021, 5:04 IST
Last Updated 7 ಮೇ 2021, 5:04 IST

ಕಲಬುರ್ಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎಂದು ಗುರುವಾರದ ಬುಲೆಟಿನ್‌ ತಿಳಿಸಿದೆ. ಈ ಮೂಲಕ ವೈರಾಣುವಿನಿಂದ ಈವರೆಗೆ ಸತ್ತವರ ಸಂಖ್ಯೆ 517ಕ್ಕೆ ಏರಿಕೆಯಾಗಿದೆ.

ಮೃತರಲ್ಲಿ ಐವರು ಮಹಿಳೆಯರು ಸೇರಿದ್ದಾರೆ. 30 ವರ್ಷದ ಒಬ್ಬ ಮಹಿಳೆ ಬಿಟ್ಟರೆ ಉಳಿದವರೆಲ್ಲ 55 ವರ್ಷ ಮೇಲ್ಪಟ್ಟವರಿದ್ದಾರೆ.

ನಗರದವರು: ಕಲಬುರ್ಗಿ ನಗರದ ಜಿಡಿಎ ಬಡಾವಣೆಯ ನಿವಾಸಿ 60 ವರ್ಷದ ಪುರುಷ, ಐವಾನ್‌ ಇ ಶಾಯಿ ಪ್ರದೇಶ 30 ವರ್ಷದ ಮಹಿಳೆ, ಸಂಗಮೇಶ್ವರ ಕಾಲೊನಿಯ 75 ವರ್ಷದ ಪುರುಷ, ಶಹಾಬಜಾರ್‌ನ 75 ವರ್ಷದ ಇನ್ನೊಬ್ಬ ಪುರುಷ, ಸಂತೋಷ ಕಾಲೊನಿಯ 56 ವರ್ಷದ ಪುರುಷ, ಮೆಹ್ತಾ ಲೇಔಟ್‌ನ 64 ವರ್ಷದ ವೃದ್ಧ ಹಾಗೂ ಕಲಬುರ್ಗಿ ತಾಲ್ಲೂಕಿನ ಕುಸನೂರಿನ 65 ವರ್ಷದ ಪುರುಷ ಮೃತಪಟ್ಟವರು.‌
‌‌‌
ಗ್ರಾಮೀಣರು: ಜೇವರ್ಗಿ ತಾಲ್ಲೂಕಿನ ಇಟಗಾ ಗ್ರಾಮದ 60 ವರ್ಷದ ಪುರುಷ, ಗಂವಾರ ಗ್ರಾಮದ 82 ವರ್ಷದ ವೃದ್ಧೆ, ಚಿಂಚೋಳಿ ತಾಲ್ಲೂಕಿನ ನಾಗಾಈದಲಾಯಿ ಗ್ರಾಮದ 79 ವರ್ಷದ ಪುರುಷ, 71 ವರ್ಷದ ಮಹಿಳೆ, 59 ವರ್ಷದ ಇನ್ನೊಬ್ಬ ಪುರುಷ, ಅಫಜಲಪುರ ತಾಲ್ಲೂಕಿನ ಕೆರಕನಹಳ್ಳಿಯ 61 ವರ್ಷದ ಮಹಿಳೆ ಹಾಗೂ ಆಳಂದ ತಾಲ್ಲೂಕಿನ ಸಾವಳಗಿಯ 70 ವರ್ಷದ ವೃದ್ಧ ಸೋಂಕಿನಿಂದ ಕೊನೆಯುಸಿರೆಳೆದವರು.

ADVERTISEMENT

1652 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಹೊಸದಾಗಿ 1652 ಮಂದಿಗೆ ವೈರಾಣು ಅಂಟಿಕೊಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 46,040ಕ್ಕೆ ಏರಿದೆ.

ಇನ್ನೊಂದೆಡೆ 564 ಮಂದಿ ಸೋಂಕುಮುಕ್ತರಾಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ ಗುಣಮುಖರಾದವರ ಸಂಖ್ಯೆ ಕೂಡ 34,225ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ 11,298 ಸಕ್ರಿಯ ಪ್ರಕರಣಗಳಿವೆ. 2159 ಮಂದಿಯ ಗಂಟಲು ಮಾದರಿಯ ವರದಿ ಇನ್ನೂ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.