ADVERTISEMENT

24 ಆರೋಪಿಗಳ ಬಂಧನ, ₹ 3.51 ಲಕ್ಷ ವಶ

ಕೊಳ್ಳೂರು ಜೂಜು ಅಡ್ಡೆ ಮೇಲೆ ತಡರಾತ್ರಿ ದಾಳಿ ನಡೆಸಿದ ಸಿಸಿಬಿ ಪೊಲೀಸರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 15:02 IST
Last Updated 27 ಸೆಪ್ಟೆಂಬರ್ 2020, 15:02 IST
ಕಲಬುರ್ಗಿ ಹೊರವಲಯದ ಕೊಳ್ಳೂರ ಗ್ರಾಮದಲ್ಲಿ ಜೂಜಾಟಕ್ಕೆ ಇಟ್ಟಿದ್ದ ಹಣ
ಕಲಬುರ್ಗಿ ಹೊರವಲಯದ ಕೊಳ್ಳೂರ ಗ್ರಾಮದಲ್ಲಿ ಜೂಜಾಟಕ್ಕೆ ಇಟ್ಟಿದ್ದ ಹಣ   

ಕಲಬುರ್ಗಿ:ನಗರದ ಹೊರವಲಯದ ಅಫಜಲಪುರ ರಸ್ತೆಯಲ್ಲಿರುವ ಕೊಳ್ಳೂರ ಗ್ರಾಮದಲ್ಲಿ ಜೂಜಾಟ ಆಡುತ್ತಿದ್ದ ಅಡ್ಡೆಯ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದಪೊಲೀಸ್ ಆಯುಕ್ತಾಲಯದ ಸಿಸಿಬಿ ಪೊಲೀಸರು, 24 ಜೂಜುಕೋರರನ್ನು ಬಂಧಿಸಿ, ಪಣಕ್ಕಿಟ್ಟಿದ್ದ ₹ 3.51 ಲಕ್ಷ ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರ ಪೊಲೀಸ್ ಕಮೀಷನರ್ ಎನ್.ಸತೀಶಕುಮಾರ, ಡಿಸಿಪಿ ಕಿಶೋರಬಾಬು, ಶ್ರೀಕಾಂತ ಕಟ್ಟಿಮನಿ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ದಿಲೀಪ್ ಸಾಗರ ಮತ್ತು ಸಿಬ್ಬಂದಿ ಶರಣಬಸವಪ್ಪ ಇಂಡಿ, ರವೀಂದ್ರಕುಮಾರ, ಮಲ್ಲಿಕಾಜರ್ುನ, ಅಶೋಕ ಇತರರು ಕೂಡಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.ಖಚಿತ ಮಾಹಿತಿ ಮೇರೆಗೆ ತಡರಾತ್ರಿ ದಾಳಿ ನಡೆಸಿದ ವೇಳೆ ಏಕಕಾಲಕ್ಕೆ ಎಲ್ಲರೂ ಸಿಕ್ಕಿಬಿದ್ದರು.

ಬಂಧಿತರನ್ನು ಮೋಹನರಾವ, ಪರ್ವೇಜ್ ಅಲಿ, ಶರಣು, ಯಲ್ಲಪ್ಪ, ಚಿತ್ರಶೇಖರ, ಬಂದಗೀಸಾಬ, ವಿಜಯ, ವಿಷ್ಣು, ನಾಗರಾಜ, ನಾಗೇಂದ್ರ, ಶರಣಪ್ಪ, ಸಂತೋಷ, ಚನ್ನಪ್ಪ, ಮಹ್ಮದ್‌ ರೆಹಮಾನ, ಚನ್ನು ಪಾಟೀಲ, ಅರುಣ ಮಾನಯ್ಯ, ರಾಜಕುಮಾರ, ರಫೀಕ್ ಅಹ್ಮದ್‌, ಭಗವಾನಸಿಂಗ್, ಮಹ್ಮದ ಈರ್ಷಾದ್, ದಶರಥ, ವಿಜಯಕುಮಾರ, ಬಂಧಿತ ಜೂಜುಕೋರರು. ಬಂಧಿತರಲ್ಲಿ ಬಹುತೇಕರು ಕಲಬುರಗಿ ನಗರದ ನಿವಾಸಿಗಳು.

ADVERTISEMENT

ಅಫಜಲಪುರ ಮತ್ತು ಕಲಬುರ್ಗಿ ತಾಲ್ಲೂಕಿನ ಕೆಲವರು ಸೇರಿಕೊಂಡು ಕೊಳ್ಳೂರು ಹೊರ ವಲಯದಲ್ಲಿರುವ ಹೊಲದಲ್ಲಿ ಜೂಜಾಡುತ್ತಿದ್ದುರು ಎಂಬ ಮಾಹಿತಿಯಿತ್ತು. ಅದರಂತೆ ದಾಳಿ ನಡೆಸಲಾಗಿದೆ. ಇನ್‌ಸ್ಪೆಕ್ಟರ್ ತಮ್ಮರಾಯ ಪಾಟೀಲ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕುರಿತು ಫರಹತಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.