ADVERTISEMENT

ಅಕ್ರಮ ಮದ್ಯ ಜಪ್ತಿ, ಬೈಕ್‌ಗಳ ವಶ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 15:56 IST
Last Updated 8 ಡಿಸೆಂಬರ್ 2020, 15:56 IST
ಚಿತ್ತಾಪುರ ಅಬಕಾರಿ ಅಧಿಕಾರಿಗಳು ಸೋಮವಾರ ವಿವಿಧೆಡೆ ದಾಳಿ ಮಾಡಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮದ್ಯ ಮತ್ತು ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ
ಚಿತ್ತಾಪುರ ಅಬಕಾರಿ ಅಧಿಕಾರಿಗಳು ಸೋಮವಾರ ವಿವಿಧೆಡೆ ದಾಳಿ ಮಾಡಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮದ್ಯ ಮತ್ತು ಬೈಕ್ ಜಪ್ತಿ ಮಾಡಿಕೊಂಡಿದ್ದಾರೆ   

ಚಿತ್ತಾಪುರ: ಇಲ್ಲಿನ ಅಬಕಾರಿ ಇಲಾಖೆಯ ಉಪ ವಿಭಾಗದ ಅಧಿಕಾರಿಗಳು ತಾಲ್ಲೂಕಿನ ವಾಡಿ ಪಟ್ಟಣದ ಬಲರಾಮ್ ಚೌಕ್ ಹತ್ತಿರ ಹಾಗೂ ಶಹಾಬಾದ್ ಎಬಿಎಲ್ ಕ್ರಾಸ್ ಹತ್ತಿರ ಸೋಮವಾರ, ಪ್ರತ್ಯೇಕ ದಾಳಿ ಮಾಡಿ ಮದ್ಯ ಮತ್ತು ಎರಡು ಬೈಕ್ ಜಪ್ತಿ ಮಾಡಿದ್ದಾರೆ.

ಅಕ್ರಮ ಮದ್ಯ ಸಾಗಾಟ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಅಬಕಾರಿ ಅಧಿಕಾರಿ, ಸಿಬ್ಬಂದಿ ಮದ್ಯ ಸಾಗಾಟ ಮಾಡುತ್ತಿದ್ದ ಎರಡು ಬೈಕ್, ಮೂರು ಬಾಕ್ಸ್ 26 ಲೀಟರ್ ಸ್ವದೇಶಿ ಮದ್ಯ, ಎರಡು ಬಾಕ್ಸ್ 15 ಲೀಟರ್ ಬಿಯರ್ ಜಪ್ತಿ ಮಾಡಿದ್ದಾರೆ. ದಾಳಿ ಸಮಯದಲ್ಲಿ ಬೈಕ್ ಸವಾರರು ಪರಾರಿಯಾಗಿದ್ದಾರೆ.

ಅಬಕಾರಿ ವಲಯ ನಿರೀಕ್ಷಕ ರಮೇಶ ಬಿರಾದಾರ, ಅಬಕಾರಿ ನಿರೀಕ್ಷಕ ಧನರಾಜ ನೇತೃತ್ವದಲ್ಲಿ ದಾಳಿ ನಡೆದಿದೆ. ಸಿಬ್ಬಂದಿ ಶಿವಾನಂದ, ಶರಣಬಸಪ್ಪ, ಮಹಾಂತೇಶ, ನಾಗರಾಜ, ಸುಭಾಷ, ಭಾಷಾಸಾಬ್, ಮಲ್ಲು ಅವರು ಭಾಗವಹಿಸಿದ್ದಾರೆ. ಚಿತ್ತಾಪುರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.