
ಕಮಲಾಪುರ: ‘ವಿನಾಕಾರಣ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆಗೆ ಸಂಘರ್ಷಿಕ್ಕಿಳಿದು ಕಲಹ ಮಾಡುತ್ತ ಕಾಲಹರಣ ಮಾಡುವುದನ್ನು ಬಿಟ್ಟು, ಮೊದಲು ರೈತರಿಗೆ ಬೆಳೆ ಪರಿಹಾರ ಒದಗಿಸಿ’ ಎಂದು ಶಾಸಕ ಬಸವರಾಜ ಮತ್ತಿಮಡು ಕಿಚಾಯಿಸಿದರು.
ಕಲಬುರಗಿ ಗ್ರಾಮೀಣ ಮತಕ್ಷೇತ್ರದ ನರೋಣಾ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ₹60 ಲಕ್ಷ ವೆಚ್ಚದ ಸಾರ್ವಜನಿಕ ಸಮುದಾಯ ಭವನ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಅತ್ಯಧಿಕ ಮಳೆಯಿಂದ ಸಂಪೂರ್ಣ ಬೆಳೆ ಹಾನಿಯಾಗಿದೆ. ರಸ್ತೆ, ಸೇತುವೆ, ಮನೆ ಸೇರಿದಂತೆ ಸಾರ್ವಜನಿಕರ ಅಪಾರ ಆಸ್ತಿ ಹಾನಿಯಾಗಿದೆ. ಮುಂಗಾರು ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ. ಸಾಲ ಹಿಂಗಾರು ಬಿತ್ತನೆಗೆ ಸಾಲ ತೆಗೆದುಕೊಳ್ಳುತ್ತಿದ್ದಾರೆ. ಉಸ್ತುವಾರಿ ಸಚಿವರು ಆರ್‌ಎಸ್‌ಎಸ್ ಜೊತೆಗಿನ ಸಂಘರ್ಷ ಬಿಟ್ಟು ಮೊದಲು ರೈತರ ಹಿತ ಕಾಪಾಡಬೇಕು’ ಎಂದು ಹೇಳಿದರು.
‘ಸಾಲ ಸೂಲದಲ್ಲಿ ಮುಳುಗಿ ರೈತ ಆತ್ಮಹತ್ಯೆ ಮಾಡಿಕೊಂಡರೆ ಕಾಂಗ್ರೆಸ್ ಸರ್ಕಾರ ಹಾಗೂ ಕಲಬುರಗಿ ಉಸ್ತುವಾರಿ ಸಚಿವರೆ ಹೊಣೆಗಾರರಾಗಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.
ಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ, ಸಂಗಮೇಶ ವಾಲಿ, ಗಂಗಪ್ಪಗೌಡ ಪಾಟೀಲ, ಮಂಜು ಕೋರಿ, ರೇವಣಸಿದ್ದಪ್ಪ ಮೂಲಗೆ, ಬಾಬು ವಾಲಿ, ಶಿವಶಂಕರ್ ವಾಲಿ, ದೀಪಕ ಸಲಗರೆ, ಮಲ್ಲಿಕಾರ್ಜುನ ಕೆರಂಬಗಿ, ಸಿದ್ದಪ್ಪ ಮಹಾಗಾಂವಕರ್, ಸಿದ್ರಾಮಪ್ಪ ನಾಟೀಕಾರ, ಚನ್ನವೀರ ಬೋಧನ್, ಮಾಣಿಕ್ ಬೋಧನ್, ರಾಜಕುಮಾರ್ ತಳವಾರ, ಯಲ್ಲಾಲಿಂಗ ಯಳಸಂಗಿ, ಸಿದ್ದು ತರವಳ್ಳಿ, ಶರಣು ಮಹಾಗಾಂವ್, ಈರಣ್ಣ ತರವಳ್ಳಿ, ಕ್ಷೇಮಲಿಂಗ ನೀಲೂರ, ಸಂತೋಷ ಧಮ್ಮೂರ, ಸಿದ್ದಪ್ಪ, ಸೂರ್ಯಕಾಂತ ಚರಪಳ್ಳಿ, ಮಲ್ಲಿನಾಥ ವಾಲಿ, ಗುರುಸಿದ್ದಯ್ಯ ಮಠಪತಿ, ಕೈಲಾಸ ರಾಗಿ, ಸೂರ್ಯಕಾಂತ ದುದ್ದಗಿ ಸೇರಿದಂತೆ ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.