ADVERTISEMENT

ಮನುಸ್ಮೃತಿ ಕೃತಿಯ ಪೋಸ್ಟರ್ ದಹನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 13:35 IST
Last Updated 25 ಡಿಸೆಂಬರ್ 2018, 13:35 IST
ದಲಿತ ಸೇನೆ ಕಾರ್ಯಕರ್ತರು ಮನುಸ್ಮೃತಿ ಕೃತಿಯ ಪೋಸ್ಟರ್ ದಹಿಸಿ ಪ್ರತಿಭಟನೆ ಮಾಡಿದರು
ದಲಿತ ಸೇನೆ ಕಾರ್ಯಕರ್ತರು ಮನುಸ್ಮೃತಿ ಕೃತಿಯ ಪೋಸ್ಟರ್ ದಹಿಸಿ ಪ್ರತಿಭಟನೆ ಮಾಡಿದರು   

ಕಲಬುರ್ಗಿ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ದಲಿತ ಸೇನೆ ಕಾರ್ಯಕರ್ತರು ಮಂಗಳವಾರ ಮನುಸ್ಮೃತಿ ಕೃತಿಯ ಪೋಸ್ಟರ್ ದಹಿಸಿ ಪ್ರತಿಭಟನೆ ಮಾಡಿದರು.

ಡಾ. ಬಿ.ಆರ್.ಅಂಬೇಡ್ಕರ್ ಅವರು 1927ರ ಡಿಸೆಂಬರ್ 25ರಂದು ತಮ್ಮ ಸಾವಿರಾರು ಅನುಯಾಯಿಗಳೊಂದಿಗೆ ಬಹಿರಂಗವಾಗಿ ಮನುಸ್ಮೃತಿಯನ್ನು ದಹಿಸಿ, ಮನುಸ್ಮೃತಿ ಜಾರಿಯನ್ನು ವಿರೋಧಿಸಿದ್ದರು. ಹೀಗಾಗಿ ಅಂದಿನಿಂದ ಪ್ರತಿ ವರ್ಷ ಮನುಸ್ಮೃತಿಯನ್ನು ದಹಿಸಿ ಕೋಮುವಾದಿ ಮನು ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ.ಮದನಕರ್, ಶಿವಲಿಂಗ ಚಲಗೇರಿ, ಯೂತ್ ಸಮಿತಿ ಅಧ್ಯಕ್ಷ ಗೌಸ್ ಬಾಬಾ ಜುನೇದಿ, ಸುನಿಲ್ ಮೇಳಕುಂದಾ, ಮಂಜುನಾಥ ಭಂಡಾರಿ, ಪ್ರಭುಲಿಂಗ, ಗುರು ಮಳಗಿ, ಪಂಚಶೀಲ ಚಾಂಬಳ, ವಿನೋದ ಕಾಂಬಳೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.