ADVERTISEMENT

ದಸರಾ ಕ್ರೀಡಾಕೂಟ; 7 ಸ್ಪರ್ಧೆಗಳಲ್ಲಿ ಬಳ್ಳಾರಿಗೆ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 16:28 IST
Last Updated 21 ಸೆಪ್ಟೆಂಬರ್ 2022, 16:28 IST
ಕಲಬುರಗಿ ನಗರದಲ್ಲಿ ಬುಧವಾರ ನಡೆದ ದಸರಾ ಕಲಬುರಗಿ ವಿಭಾಗ ಮಟ್ಟದ ಕ್ರೀಡಾಕೂಟದ ಹ್ಯಾಂಡ್‌ಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದ ಕಲಬುರಗಿ ತಂಡ
ಕಲಬುರಗಿ ನಗರದಲ್ಲಿ ಬುಧವಾರ ನಡೆದ ದಸರಾ ಕಲಬುರಗಿ ವಿಭಾಗ ಮಟ್ಟದ ಕ್ರೀಡಾಕೂಟದ ಹ್ಯಾಂಡ್‌ಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದ ಕಲಬುರಗಿ ತಂಡ   

ಕಲಬುರಗಿ: ಬುಧವಾರ ನಡೆದ ಕಲಬುರಗಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಏಳು ಜಿಲ್ಲೆಗಳಿಂದ ಬಂದಿದ್ದ ನೂರಾರು ಕ್ರೀಡಾಗಳು ಉತ್ಸಾಹದಿಂದ ಪಾಲ್ಗೊಂಡರು.

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿದ್ದ ಕ್ರೀಡಾಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ವಿವಿಧ ಸ್ಪರ್ಧೆಗಳ ವಿಜೇತರು (ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ)

100 ಮೀ. ಓಟ: ಬಳ್ಳಾರಿಯ ದೇವಿ
ಪ್ರಸಾದ ಚಂದ್ರಕಾಂತ, ಪ್ರವೀಣ ಕುಮಾರ ಮತ್ತು ಜಂಬಣ್ಣ ಶೇಖರಪ್ಪ (ಪುರುಷ). ಯಾದಗಿರಿಯ ನೇಹಾ ಬಿ.ಎಸ್‌. ಪಾಟೀಲ, ಕೊಪ್ಪಳದ ಪಾರ್ವತಿ ನೀಲಪ್ಪ ಮತ್ತು ಪರಿಮಳಾ ಫಕೀರಪ್ಪ (ಮಹಿಳೆ).

ADVERTISEMENT

200 ಮೀ. ಓಟ: ಕಲಬುರಗಿಯ ಶ್ರೀನಿವಾಸ ರಾಮು, ರಾಯಚೂರಿನ ಸೋಮಲಿಂಗಪ್ಪ ಲಕ್ಷ್ಮಣ ಮತ್ತು ಬಳ್ಳಾರಿಯ ಸಾಗರ ಪಡಹರಿ(ಪುರುಷ). ಕಲಬುರಗಿಯ ಮಹೇಶ್ವರಿ ಭೀಮಾಶಂಕರ, ಯಾದಗಿರಿಯ ನೇಹಾ ಪಾಟೀಲ ಹಾಗೂ ಕೊಪ್ಪಳದ ಪವಿತ್ರಾ ನೀಲಪ್ಪ(ಮಹಿಳೆ).

400 ಮೀ.ಓಟ: ರಾಯಚೂರಿನ ರವಿ
ಕುಮಾರ ರಂಗಪ್ಪ, ಕೊಪ್ಪಳದ ಮಂಜುನಾಥ ಹಣಮಪ್ಪ ಮತ್ತು ಯಾದಗಿರಿಯ ಸಿದ್ದು ಶ್ರೀಮಂತ (ಪುರುಷ). ಬೀದರ್‌ನ ಪೂಜಾ ಅಶೋಕ ಲಮಾಣಿ, ರಾಯಚೂರಿನ ರೇಣುಕಾ ಮರೆಪ್ಪ ಮತ್ತು ಬೀದರ್ ಸಾವಿತ್ರಿ ರಘುನಾಥ(ಮಹಿಳೆ).

1500ಮೀ.ಓಟ: ಕೊಪ್ಪಳದ ಬಸನಗೌಡ ಲಕ್ಷ್ಮಣಗೌಡ, ಬೀದರ್‌ನ ಪ್ರಮೋದ ರಾಜಕುಮಾರ ಮತ್ತು ಕೊಪ್ಪಳದ ವಿಷ್ಣುರೆಡ್ಡಿ (ಪುರುಷ). ಬೀದರ್‌ನ ಮಯೂರಿ ಚಂದ್ರಕಾಂತ, ಕೊಪ್ಪಳದ ನಾಗವೇಣಿ ಶಿವಪುತ್ರಪ್ಪ ಮತ್ತು ಬೀದರ್‌ನ ಮಹಾದೇವಿ ಚಂದ್ರಕಾಂತ (ಮಹಿಳೆ).

ಉದ್ದ ಜಿಗಿತ: ರಾಯಚೂರಿನ ತಿಮ್ಮರೆಡ್ಡಿ, ಕಲಬುರಗಿಯ ಅಶ್ವತ್ ಬಕ್ಕಪ್ಪ ಮತ್ತು ಕೊಪ್ಪಳದ ಸತೀಶ (ಪುರುಷ). ಕಲಬುರಗಿಯ ಮಹೇಶ್ವರಿ, ಯಾದಗಿರಿಯ ನೇಹಾ ಪಾಟೀಲ ಮತ್ತು ಕಲಬುರಗಿಯ ಜಯಶ್ರೀ (ಮಹಿಳೆ).

ತ್ರಿಪಲ್‌ಜಂಪ್: ಯಾದಗಿರಿಯ ನಿಂಗಣ್ಣಾ ಆರ್, ರಾಯಚೂರಿನ ರಾಹುಲ್ ಮತ್ತು ಕೊಪ್ಪಳದ ಅಲ್ಲಾಬಕ್ಷ್ (ಪುರುಷ). ಕೊಪ್ಪಳದ ರಾಧಿಕಾ ಚನ್ನಬಸಯ್ಯಾ, ಕಲಬುರಗಿಯ ಸಾನಿಯಾ ಮತ್ತು ಯಾದಗಿರಿಯ ನಿಶತ್ ಬೇಗಂ (ಮಹಿಳೆ).

110 ಹರ್ಡಲ್ಸ್: ಬಳ್ಳಾರಿಯ ಶಿವಪ್ರಸಾದ ಚಂದ್ರಶಾ, ಕೊಪ್ಪಳದ ಪ್ರವೀಣಕುಮಾರ ರುದ್ರಗೌಡ ಮತ್ತು ಕೊಪ್ಪಳ ಜಾಬಣ್ಣ ಶಂಕ್ರೆಪ್ಪ (ಪುರುಷ)

4X100 ಮೀ. ರಿಲೇ ಪ್ರಥಮ: ಬಳ್ಳಾರಿಯ ದೇವಿಪ್ರಸಾದ ಚಂದ್ರಕಾಂತ, ನಿತಿನ್ ರಾಜೇಂದ್ರ, ರಾಮಕೃಷ್ಣ ನಾಯ್ಕ ವೆಂಕಟೇಶ ಮತ್ತು ಸಾಗರ ಪಾಂಡಹರಿ (ಪುರುಷ). ಕೊಪ್ಪಳದ ಪವಿತ್ರಾ ನೀಲಪ್ಪ, ಪರಿಮಳಾ ಫಕೀರಪ್ಪ, ಸುನೀತಾ ಶಂಕ್ರೆಪ್ಪ ಮತ್ತು ನಾವೇಣಿ ಶಿವಪುತ್ರಪ್ಪ
(ಮಹಿಳೆ).

4X400 ಮೀ ರಿಲೇ ಪ್ರಥಮ: ಬೀದರ್‌ನ ಶಿವಕುಮಾರ ಷಣ್ಮುಖ, ಶಿವಕುಮಾರ ಶೇಷಪ್ಪ, ಉದಯಕುಮಾರ ಅಂಬಣ್ಣಾ ಮತ್ತು ಯಲ್ಲಾಲಿಂಗ ಹಣಮಂತ (ಪುರುಷ). ಕೊಪ್ಪಳದ ಯಲ್ಲಮ್ಮ ಬಸವರಾಜ, ಕಾವೇರಿ ನಾಗರಾಜ, ಸಿಂಧು ನಂದೀತ ಮತ್ತು ಶಿಲ್ಪಾ ದೇವಪ್ಪ (ಮಹಿಳೆ).

ಹ್ಯಾಂಡ್ ಬಾಲ್: ಕಲಬುರಗಿ ಪ್ರಥಮ ಮತ್ತು ಬಳ್ಳಾರಿ ದ್ವಿತೀಯ (ಪುರುಷ). ಕೊಪ್ಪಳ ಪ್ರಥಮ ಮತ್ತು ಕಲಬುರಗಿ ದ್ವಿತೀಯ‌

‘ಸೋಲು–ಗೆಲವು ಸಮನಾಗಿ ಸ್ವೀಕರಿಸಿ’

’ಕ್ರೀಡೆಯಲ್ಲಿನ ಸೋಲು–ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಜಿಲ್ಲೆಯ ಹೆಸರನ್ನು ರಾಜ್ಯದಲ್ಲಿ ಗುರುತಿಸಿ, ಕೀರ್ತಿ ತರುವಂತಹ ಯಶಸ್ಸು ಸಾಧಿಸಿ’ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ನವೀನ್ ಕುಮಾರ್ ಹಾರೈಸಿದರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸ್ಪಷ್ಟವಾದ ಗುರಿ, ಹುಮ್ಮಸ್ಸು ಮತ್ತು ಆಸಕ್ತಿಯಿಂದ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಇದೊಂದು ಆರೋಗ್ಯಪೂರ್ಣ ಕ್ರೀಡೆಯಾಗಲಿ’ ಎಂದರು.

ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ಮಾತನಾಡಿ, ‘ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪದರ್ಶನ ನೀಡಿ, ರಾಜ್ಯ ಮಟ್ಟದಲ್ಲಿಯೂ ಯಶಸ್ವಿ ಸಾಧಿಸಿ. ಯಾವುದೇ ಪಕ್ಷ ಭೇದವಿಲ್ಲದೆ ಸಮರ್ಥವಾಗಿ ಕ್ರೀಡೆಯಲ್ಲಿ ಭಾಗವಹಿಸಿ’ ಎಂದು ಹಾರೈಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ, ತಾಲ್ಲೂಕು ದೈಹಿಕ ಶಿಕ್ಷಕ ವಿಷಯ ವೀಕ್ಷಕ ಶಿವಶರಣಪ್ಪ ಮಕಾಳೆ, ಕೆಂಭಾವಿ ದೈಹಿಕ ಶಿಕ್ಷಕ ಮುಜಮ್ಮಲ್, ದೈಹಿಕ ಶಿಕ್ಷಕ ಧನಂಜಯ್ ರಾಯಚೂರು, ಹಾಕಿ ತರಬೇತುದಾರ ಸಂಜಯ್ ಬಾಣದ, ಬ್ಯಾಸ್ಕೆಟ್ ಬಾಲ್ ತರಬೇತಿದಾರ ಪ್ರವೀಣ್ ಪುಣೆ, ಅಥ್ಲೆಟಿಕ್ಸ್ ತರಬೇತಿದಾರ ರಾಜು ಚವ್ಹಾಣ್, ಕರಾಟೆ ತರಬೇತಿದಾರ ಮನೋಹರ್ ಬಿಂಗೆ, ಜೋಡೊ ತರಬೇತಿದಾರ ಅಶೋಕ್ ಎಂ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.