ADVERTISEMENT

ಲಂಬಾಣಿ ತಾಂಡಾಗಳಲ್ಲಿ ಗೋಧನ‌ ಪೂಜೆಯಲ್ಲಿ ಯುವತಿಯರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2022, 8:48 IST
Last Updated 26 ಅಕ್ಟೋಬರ್ 2022, 8:48 IST
   

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಬುಧವಾರ ಬೆಳಿಗ್ಗೆ ತಾಂಡಾದ ಯುವತಿಯರು ಗೋಧನ ಪೂಜೆಗಾಗಿ ಕಾಡಿಗೆ ತೆರಳಿ ಕಾಡಿನಲ್ಲಿ ದೊರೆಯುವ ಹೂವುಗಳನ್ನು ಕಿತ್ತು ಬುಟ್ಟಿಯಲ್ಲಿ ತುಂಬಿಕೊಂಡು ಮರಳಿದರು. ಹೀಗೆ ಹೂವಿನ ಬುಟ್ಟಿ ಹೊತ್ತು ಬಂದ ಯುವತಿಯರಿಗೆ ತಾಂಡಾದ ನಾಯಕ ಕಾರಭಾರಿಗಳು, ಮುಖಂಡರು ವಾದ್ಯವೃಂದದ ಮೂಲಕ‌ ಬರಮಾಡಿಕೊಂಡರು.

ತರಹೇವಾರಿ ಬಣ್ಣಗಳ ಸೀರೆ, ಕುಪ್ಪಸ, ಘಾಗ್ರಾ, ಪಂಜಾಬಿ ಮತ್ತು ಉದ್ದನೆಯ ಫ್ರಾಕ್ ಧರಿಸಿ ಮಿಂಚಿದ ಹೂಬುಟ್ಟಿ ಹೊತ್ತು ಸಾಂಪ್ರದಾಯಿಕ ನೃತ್ಯದ ಜತೆಗೆ ಹಾಡು ಹೇಳುತ್ತ ಬಂದ ದೃಶ್ಯ ಸಾಂಸ್ಕೃತಿಕ ಹಿರಿಮೆ ಸಾರುವಂತಿತ್ತು.

ಮೊದಲಿಗೆ ಸೇವಾಲಾಲ‌ ಮರಿಯಮ್ಮ‌ ಮಂದಿರಗಳಿಗೆ ಬಂದ ಯುವತಿಯರು ದೇವರಿಗೆ ನಮಿಸಿ ಗೋದನ ಪೂಜೆ ನೆರವೇರಿಸಿದರು. ತಾಂಡಾದ ಪ್ರತಿಯೊಂದ ಮನೆಗೆ ತೆರಳಿ ಸಾಂಪ್ರದಾಯಿಕ ಹಾಡು ಹೇಳುತ್ತ ಪೂಜೆ ನೆರವೇರಿಸಿದರು.

ADVERTISEMENT

ಇಲ್ಲಿನ ಚಂದಾಪುರ ಗಂಗೂನಾಯಕ ತಾಂಡಾದಲ್ಲಿ‌ ನಡೆದ ದೀಪಾವಳಿ ಸಂಭ್ರಮದಲ್ಲಿ‌ ಗೇಮು‌ ನಾಯಕ, ಕಿಶನ ಕಾರಭಾರಿ, ರಮೇಶ ಕಾರಭಾರಿ, ಶಿವರಾಂ ಡಾವ್, ವಾಚು ರಾಠೋಡ, ವನ್ಯಜೀವಿ ಧಾಮ ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ, ಬಾಲು ಪೂಜಾರಿ, ಚಂದ್ರು ಜಾಧವ, ಫೂಲಸಿಂಗ್ ರಾಠೋಡ, ರಾಜು ಚವ್ಹಾಣ, ರಾಜು ಮೇಘರಾಜ ಪವಾರ, ನಾರಾಯಣ ಚವ್ಹಾಣ, ದಶರಥ ಚವ್ಹಾಣ ಇದ್ದರು.

ತಾಲ್ಲೂಕಿನ‌ ಐನೊಳ್ಳಿ ತಾಂಡಾದಲ್ಲಿ ನಡಗರದ ದೀಪಾವಳಿ ಸಂಭ್ರಮದಲ್ಲಿ ಮೋನು ನಾಯಕ, ನಾಮು ಕಾರಭಾರಿ, ಲಕ್ಷ್ಮಣ ಹಾಮಜಿ, ನರಸಿಂಗ್ ಚಿನ್ನಾ ರಾಠೋಡ, ಜೇಮಸಿಂಗ್ ರಾಠೋಡ ಪೂಜಾರಿ, ಸುಭಾಷ ರಾಠೋಡ ಹಾಗೂ ಉಪ ವಲಯ ಅರಣ್ಯಾಧಿಕಾರಿ ಸಿದ್ಧಾರೂಢ ಹೊಕ್ಕುಂಡಿ ಮೊದಲಾದವರು ಇದ್ದರು.

ದೀಪಾವಳಿ ಪ್ರಯುಕ್ತ ಇಲ್ಲಿನ‌ ತಾಂಡಾಗಳಿಗೆ ಭೇಟಿ‌ ನೀಡಿ ಸಂಸದ ಡಾ. ಉಮೇಶ ಜಾಧವ ಹಬ್ಬದ ಶುಭ ಕೋರಿದರು.ದೀಪಾವಳಿ ಲಂಬಾಣಿ ಸಮುದಾಯದಲ್ಲಿ ದೊಡ್ಡ ಹಬ್ಬ ಎಂಬ ಖ್ಯಾತಿಯಿದೆ. ಹೀಗಾಗಿ ಸಂಸದರು ತಾಂಡಾಗಳಿಗೆ ತೆರಳಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.

ಕಾಳಿಮಾಸ ಆಚರಣೆ ಮೇರಾ ಸಮರ್ಪಣೆ: ತಾಲ್ಲೂಕಿನ ಚಿಮ್ಮನಚೋಡ ಬಳಿಯ ಚೌಕಿ ತಾಂಡಾದಲ್ಲಿ‌ ಮಂಗಳವಾರ ಕಾಳಿಮಾಸ ಆಚರಿಸಿದ ಉಮೇಶ ಜಾಧವ ಅವರು ಮೇರಾ ಸ್ವೀಕರಿಸಿದರು.ಈ ವೇಳೆ ದೀಪ ಬೆಳಗಿದ ತಾಂಡಾದ ಯುವತಿಯರಿಗೆ ಸಂಸದರು ಕಾಣಿಕೆ ನೀಡಿದರು.

ತಾ.ಪಂ. ಮಾಜಿ ಅಧ್ಯಕ್ಷ ಶಾಮರಾವ ರಾಠೋಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಹೀರಾಸಿಂಗ್ ರಾಠೋಡ, ತಾ.ಪಂ. ಮಾಜಿಸದಸ್ಯ ಪ್ರೇಮಸಿಂಗ್ ಜಾಧವ, ಮುಖಂಡರಾದ ಅಶೋಕ ಚವ್ಹಾಣ, ರಾಜು ಪವಾರ, ದಿವಾಕರ ಜಹಾಗೀರದಾರ, ಭೋಜು, ಕುರುಮದಾಸ, ಮಲ್ಲು ಕೂಡಾಂಬಲ್, ರಾಮರೆಡ್ಡಿ ಪಾಟೀಲ, ಚಂದು ನಾಯಕ್, ಮುನಿಸಿಂಗ್ ಕಾರಭಾರಿ, ಓಂನಾಥ ಜಾಧವ, ಪಂಡರಿ, ಯಶೋಧಬಾಯಿ ತುಕಾರಾಮ, ಶಂಕರ ರಾಠೋಡ, ಜಯಸಿಂಗ್ ಗೋವಿಂದ ರಾಠೋಡ ಶಾಮರಾವ್, ಗಣೇಶ ನಾಯಕ, ವೀರಶೆಟ್ಟಿ ಗಾಯಕ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.