ADVERTISEMENT

ಗೌಡನಹಳ್ಳಿ: ಮದ್ಯ ಅಕ್ರಮ‌ ಮಾರಾಟಕ್ಕೆ ಕಡಿವಾಣ ಹಾಕಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 14:45 IST
Last Updated 19 ಜುಲೈ 2024, 14:45 IST
ಚಿಂಚೋಳಿ ತಾಲ್ಲೂಕು ಗೌಡನಹಳ್ಳಿ ಗ್ರಾಮಸ್ಥರು ಮದ್ಯ ಅಕ್ರಮ‌ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಶುಕ್ರವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು
ಚಿಂಚೋಳಿ ತಾಲ್ಲೂಕು ಗೌಡನಹಳ್ಳಿ ಗ್ರಾಮಸ್ಥರು ಮದ್ಯ ಅಕ್ರಮ‌ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಶುಕ್ರವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು    

ಚಿಂಚೋಳಿ: ‘ತಾಲ್ಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ಗ್ರಾಮದಲ್ಲಿ‌ ನಿತ್ಯ ಕಿರಿಕಿರಿ, ಜಗಳ, ಅಶಾಂತಿ ಉಂಟಾಗುತ್ತಿದೆ. ಹೀಗಾಗಿ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕು’ ಎಂದು ಗ್ರಾಮಸ್ಥರಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಮದ್ಯ ಖರೀದಿಗೆ ಸುತ್ತಲಿನ ಗ್ರಾಮಗಳ ಜನರು ಗೌಡನಹಳ್ಳಿಗೆ ಬರುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಜಗಳ ಸೇರಿದಂತೆ ಅನುಚಿತ ಘಟನೆಗಳು ನಡೆಯುತ್ತಿವೆ. ರಾತ್ರಿ ಸಮಯದಲ್ಲಿ ಮದ್ಯ ಖರೀದಿಗೆ ಬರುತ್ತಾರೆ. ಈ ವೇಳೆ ಗ್ರಾಮದ ಮಹಿಳೆಯರು ನೀಮಾಹೊಸಳ್ಳಿ ರಸ್ತೆಯ ಪಕ್ಕದಲ್ಲಿ ಬಯಲು ಶೌಚಕ್ಕೆ ತೆರಳುತ್ತಾರೆ. ಈ ವೇಳೆ ಮದ್ಯದ ನಶೆಯಲ್ಲಿ ದುರ್ಘಟನೆ ನಡೆದರೆ ಅದಕ್ಕೆ ತಾಲ್ಲೂಕು ಆಡಳಿತವೇ ಹೊಣೆಯಾಗುತ್ತದೆ. ಹೀಗಾಗಿ ಸಂಬಂಧಿಸಿದ ಅಬಕಾರಿ ಇಲಾಖೆ, ಪೊಲೀಸರು ಹಾಗೂ ತಾಲ್ಲೂಕು ಆಡಳಿತ ಕಟ್ಟು ನಿಟ್ಟಿನ‌ ಕ್ರಮ‌ ಕೈಗೊಂಡು ಮದ್ಯ ಮಾರಾಟ ತಕ್ಷಣದಿಂದಲೇ ಬಂದ್ ಮಾಡಬೇಕು’ ಎಂದು ಆಗ್ರಹಿಸಿದರು. ಗ್ರಾಮಸ್ಥರ ಮನವಿ ನಿರ್ಲಕ್ಷಿಸಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಅಬಕಾರಿ ನಿರೀಕ್ಷಕರ ಕಚೇರಿ‌ ಮತ್ತು ಚಿಂಚೋಳಿ ಪೊಲೀಸ್ ಠಾಣಾಧಿಕಾರಿಗೂ ಮನವಿ ಸಲ್ಲಿಸಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ.ಸದಸ್ಯರಾದ ಲಕ್ಷ್ಮೀಕಾಂತ ಶಂಕೂರ, ರವಿಕುಮಾರ ಅಲ್ಲಾಪುರ ಹಾಗೂ ರಾಜಕುಮಾರ ತಳವಾರ ಮುಖಂಡರಾದ ಧರ್ಮರಾವ ಪಾಟೀಲ, ಗಿರೆಪ್ಪಗೌಡ, ಜಗನ್ನಾಥ ತಾಂಡೂರು, ವಿಜಯಕುಮಾರ ಹುಳಗೇರಿ, ವಿಜಯಲಕ್ಷ್ಮಿ, ರಾಜು ಪೂಜಾರಿ, ಚಾಂದಪಾಶಾ, ಉಸ್ಮಾನ ಅಲಿ‌ಮುಲ್ಲಾ, ಗ್ರಾ.ಪಂ. ಸದಸ್ಯರಾದ ಲಕ್ಷ್ಮೀಕಾಂತ ಶಂಕೂರ, ರವಿಕುಮಾರ ಅಲ್ಲಾಪುರ ಹಾಗೂ ರಾಜಕುಮಾರ ತಳವಾರ ಮುಖಂಡರಾದ ಧರ್ಮರಾವ ಪಾಟೀಲ, ಗಿರೆಪ್ಪಗೌಡ, ಜಗನ್ನಾಥ ತಾಂಡೂರು, ವಿಜಯಕುಮಾರ ಹುಳಗೇರಿ, ವಿಜಯಲಕ್ಷ್ಮಿ, ರಾಜು ಪೂಜಾರಿ, ಚಾಂದಪಾಶಾ, ಉಸ್ಮಾನ ಅಲಿ‌ಮುಲ್ಲಾ, ವಿಲಾಸ್ ಬಡಿಗೇರ್, ಮೇತ್ರಿ ಇತರರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.