
ಪ್ರಜಾವಾಣಿ ವಾರ್ತೆ
ಕಲಬುರಗಿ: ನಗರದ ಪ್ರಮುಖ ಸ್ಥಳಗಳಿಗೆ ಸಂಪರ್ಕ ಜಾಲವಾದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ(ತಿಮ್ಮಾಪುರಿ ವೃತ್ತ)ದಲ್ಲಿ ಗಲೀಜು ನೀರು ರಸ್ತೆ ಮೇಲೆ ಹರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ.
ಈ ಸ್ಥಳದಲ್ಲಿ ಕೇಂದ್ರ ಬಸ್ ನಿಲ್ದಾಣ ಮತ್ತು ರಾಮಮಂದಿರ ಕಡೆ ಹೋಗುವ ಪ್ರಯಾಣಿಕರು ಆಟೊಕ್ಕಾಗಿ ನಿಲ್ಲುತ್ತಾರೆ. ರೈಲು ನಿಲ್ದಾಣ ಮತ್ತಿತರ ಕಡೆಯಿಂದ ಬರುವ ಜನ ಕಲುಷಿತ ವಾತಾವರಣದಲ್ಲಿಯೇ ಆಟೊ ಹತ್ತುವಂತಾಗಿದೆ. ಸಾರ್ವಜನಿಕರು ಸಹ ಗಲೀಜು ನೀರು ತುಳಿದುಕೊಂಡೇ ಓಡಾಡುವಂತಾಗಿದೆ. ಬಹುಶಃ ಒಳಚರಂಡಿ ನೀರು ರಸ್ತೆ ಮೇಲೆ ಬರುತ್ತಿರಬಹುದು. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ಸಮಸ್ಯೆ ಪರಿಹರಿಸಬೇಕು ಎಂದು ಎಂಎಸ್‌ಕೆ ಮಿಲ್ ನಿವಾಸಿ ಇಸ್ಮಾಯಿಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.