ADVERTISEMENT

3 ದಿನಗಳ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ತೆರೆ: DAR ಘಟಕ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:19 IST
Last Updated 1 ಡಿಸೆಂಬರ್ 2025, 5:19 IST
ಕಲಬುರಗಿ ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಡಿಎಆರ್‌ ಪೊಲೀಸ್‌ ತಂಡ ಹಾಗೂ ಆಳಂದ ಉಪವಿಭಾಗದ ಪೊಲೀಸ್‌ ತಂಡಗಳ ನಡುವೆ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯ ರೋಚಕ ಕ್ಷಣ
–ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್
ಕಲಬುರಗಿ ನಗರದ ಜಿಲ್ಲಾ ಪೊಲೀಸ್ ಮೈದಾನದಲ್ಲಿ ಭಾನುವಾರ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಡಿಎಆರ್‌ ಪೊಲೀಸ್‌ ತಂಡ ಹಾಗೂ ಆಳಂದ ಉಪವಿಭಾಗದ ಪೊಲೀಸ್‌ ತಂಡಗಳ ನಡುವೆ ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯ ರೋಚಕ ಕ್ಷಣ –ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್   

ಕಲಬುರಗಿ: ಕಬಡ್ಡಿ ಹಾಗೂ ವಾಲಿಬಾಲ್‌ ಜೊತೆಗೆ ವೈಯಕ್ತಿಕ ಸ್ಪರ್ಧೆಗಳಲ್ಲಿ ಮಿಂಚಿದ ಜಿಲ್ಲಾ ಡಿಎಆರ್‌ ಘಟಕವು ನಗರದ ಜಿಲ್ಲಾ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಭಾನುವಾರ ಸಂಪನ್ನಗೊಂಡ ಮೂರು ದಿನಗಳ ಜಿಲ್ಲಾ ವಾರ್ಷಿಕ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಎರಡು ಫೀಲ್ಡ್‌ ಹಾಗೂ ಮೂರು ಟ್ರ್ಯಾಕ್‌ ಸ್ಪರ್ಧೆಯಲ್ಲಿ ಮಿಂಚಿನ ಪ್ರದರ್ಶನ ತೋರಿದ ಡಿಎಆರ್‌ ಘಟಕದ ಹೆಡ್‌ ಕಾನ್‌ಸ್ಟೆಬಲ್‌ ಉದಯಕುಮಾರ್‌ ಸತತ ಏಳನೇ ವರ್ಷವೂ ಕ್ರೀಡಾಕೂಟದ ಪುರುಷರ ವಿಭಾಗದ ‘ಸರ್ವೋತ್ತಮ ಆಟಗಾರ’ ಪ್ರಶಸ್ತಿ ಬಾಚಿದರು. ಕ್ರೀಡಾಕೂಟದಲ್ಲಿ ಸ್ಥಿರ ಪ್ರದರ್ಶನ ನೀಡಿದ ಜೇವರ್ಗಿಯ ಮಾಸಾಬಿ ‘ಸರ್ವೋತ್ತಮ ಆಟಗಾರ್ತಿ’ ಪ್ರಶಸ್ತಿ ಗೆದ್ದರು.

ತುರುಸಿನ ಪೈಪೋಟಿ ಹಾಗೂ ರೋಚಕತೆಗೆ ಸಾಕ್ಷಿಯಾದ ‘ಹಗ್ಗ–ಜಗ್ಗಾಟ’ ಸ್ಪರ್ಧೆಯಲ್ಲಿ ಆಳಂದ ಉಪವಿಭಾಗ ಮೊದಲ ಸ್ಥಾನ ಪಡೆದರೆ, ಡಿಎಆರ್‌ ಘಟಕವು 2ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ADVERTISEMENT

ಕಬಡ್ಡಿ ಸ್ಪರ್ಧೆಯಲ್ಲಿ ಡಿಎಆರ್‌ ತಂಡವು ಆಳಂದ ತಂಡವನ್ನು ಮಣಿಸಿತು. ವಾಲಿಬಾಲ್‌ ಸ್ಪರ್ಧೆಯಲ್ಲಿ ಡಿಎಆರ್‌ ತಂಡವು ಕಲಬುರಗಿ ಗ್ರಾಮೀಣ ತಂಡವನ್ನು ಪರಾಭವಗೊಳಿಸಿತು.

ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಈಶಾನ್ಯ ವಲಯ ಡಿಐಜಿಪಿ ಶಾಂತನು ಸಿನ್ಹಾ ಅವರು ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ವಿತರಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಇದ್ದರು.

ವಿವಿಧ ಕ್ರೀಡೆಗಳ ಫಲಿತಾಂಶ; ಪುರುಷ ವಿಭಾಗ:

100 ಮೀ ಓಟ (ಡಿವೈಎಸ್ಪಿ): ಡಿಎಆರ್‌ನ ಶರಣಪ್ಪ ಎಚ್‌.ಎಸ್‌.–1, ಶಹಾಬಾದ್‌ನ ಶಂಕರಗೌಡ ಪಾಟೀಲ–2, ಚಿಂಚೋಳಿಯ ಸಂಗಮನಾಥ ಹಿರೇಮಠ–3; 100 ಮೀ ಓಟ (ಸಿಪಿಐ/ಪಿಐ/ಆರ್‌ಪಿಐ): ಸೇಡಂ ಸಿಪಿಐ ಮಹಾದೇವಪ್ಪ–1, ವೈರ್‌ಲೆಸ್‌ನ ಉಸ್ಮಾನ್‌ ಪಟೇಲ್‌ ಹಾಗೂ ಸುಲೇಪೇಟೆಯ ರಾಘವೇಂದ್ರ–2, ಆಳಂದದ ಶರಣಬಸಪ್ಪ ಕೋಡ್ಲಾ–3, 100 ಮೀ ಓಟ (ಪಿಎಸ್‌ಐ): ಮಾಡಬೂಳದ ಸಿದ್ಧಲಿಂಗ–1, ನೆಲೋಗಿಯ ಚಿದಾನಂದ–2, ಮಹಾಗಾಂವ್‌ನ ಬಸವರಾಜ ಹಾಗೂ ಅಫಜಲಪುರದ ಸೋಮಲಿಂಗ–3.

ಜಾವೆಲಿನ್‌ (ಡಿವೈಎಸ್ಪಿ): ಚಿಂಚೋಳಿಯ ಸಂಗಮನಾಥ ಹಿರೇಮಠ–1, ಡಿಎಆರ್‌ನ ಶರಣಪ್ಪ ಎಚ್‌.ಎಸ್‌.–2, ಆಳಂದದ ತಮ್ಮರಾಯ ಪಾಟೀಲ–3; ಜಾವೆಲಿನ್‌ (ಸಿಪಿಐ/ಪಿಐ/ಆರ್‌ಪಿಐ): ಡಿಎಆರ್‌ನ ಮಲ್ಲಯ್ಯ–1, ಮುಧೋಳದ ದೌಲತ್‌ ಕುರಿ–2, ಶಹಾಬಾದ್‌ನ ನಟರಾಜ ಲಾಡೆ ಹಾಗೂ ಆಳಂದದ ಶರಣಬಸಪ್ಪ ಕೊಡ್ಲಾ–3; ಜಾವೆಲಿನ್‌ (ಪಿಎಸ್‌ಐ): ಡಿಎಆರ್‌ನ ದುರ್ಗಸಿಂಹ–1, ಡಿಎಆರ್‌ನ ಚಂದ್ರರೆಡ್ಡಿ–2, ಡಿಎಆರ್‌ನ ಹೇಮಂತಕುಮಾರ–3.

9 ಎಂಎಂ ಪಿಸ್ತೂಲ್‌ ಶೂಟಿಂಗ್‌ (ಡಿವೈಎಸ್ಪಿ):ಡಿಎಆರ್‌ನ ಶರಣಪ್ಪ ಎಚ್‌.ಎಸ್‌.–1, ಗ್ರಾಮೀಣ ವಿಭಾಗದ ಲೋಕೇಶಪ್ಪ-2, ಶಹಾಬಾದ್‌ನ ಶಂಕರಗೌಡ ಪಾಟೀಲ–3; 9 ಎಂಎಂ ಪಿಸ್ತೂಲ್‌ ಶೂಟಿಂಗ್‌ (ಸಿಪಿಐ/ಆರ್‌ಪಿಐ): ಡಿಎಆರ್‌ನ ಚಂದ್ರಶೇಖರ–1, ಮುಧೋಳದ ದೌಲತ್‌ ಕುರಿ–2, ಸೇಡಂನ ಮಹಾದೇವಪ್ಪ ಹಾಗೂ ಸುಲೇಪೇಟೆಯ ರಾಘವೇಂದ್ರ–3; 9 ಎಂಎಂ ಪಿಸ್ತೂಲ್‌ ಶೂಟಿಂಗ್‌ (ಪಿಎಸ್‌ಐ): ಕೊಂಚಾವರಂನ ವೆಂಕಟೇಶ–1, ಅಫಜಲಪುರದ ಸೋಮಲಿಂಗ ಒಡೆಯರ್‌–2, ಕಾಳಗಿಯ ವಿಶ್ವನಾಥ–3. 

7.62 ರೈಫಲ್‌ ಶೂಟಿಂಗ್ (ಡಿವೈಎಸ್ಪಿ): ಶಹಾಬಾದ್‌ನ ಶಂಕರಗೌಡ ಪಾಟೀಲ, ಡಿಎಆರ್‌ನ ಶರಣಪ್ಪ –2, ಗ್ರಾಮೀಣ ವಿಭಾಗದ ಲೋಕೇಶಪ್ಪ –3; 7.62 ರೈಫಲ್‌ ಶೂಟಿಂಗ್ (ಸಿಪಿಐ/ ಆರ್‌ಪಿಐ): ಸುಲೇಪೇಟೆಯ ರಾಘವೇಂದ್ರ–1, ಡಿಎಆರ್‌ನ ಮಲ್ಲಯ್ಯ–2, ಕಾಳಗಿಯ ಜಗದೇವಪ್ಪ–3; 7.62 ರೈಫಲ್‌ ಶೂಟಿಂಗ್ (ಪಿಎಸ್‌ಐ/ಆರ್‌ಎಸ್‌ಐ): ಡಿಎಆರ್‌ನ ಚಂದ್ರರೆಡ್ಡಿ–1, ಡಿಎಆರ್‌ನ ಹೇಮಂತಕುಮಾರ–2, ಮಾಡಬೂಳದ ಸಿದ್ದಲಿಂಗ ಹಾಗೂ ವೈರ್‌ಲೆಸ್‌ನ ಅಮರೇಶ–3.

ಮಹಿಳಾ ವಿಭಾಗ: ಜಾವೆಲಿನ್‌ ಎಸೆತ (ಪಿಎಸ್‌ಐ): ರಟಕಲ್‌ನ ಶೀಲಾದೇವಿ–11, ಡಿಎಸ್‌ಎ ಮಂಜುಳಾ–2, ಚಿಂಚೋಳಿಯ ಗಂಗಮ್ಮ–3; 100 ಮೀ ಓಟ (ಪಿಎಸ್‌ಐ): ರೇವೂರಿನ ವಾತ್ಸಲ್ಯ–1 ನರೋಣಾದ ಗಂಗಮ್ಮ–2, ಚಿಂಚೋಳಿಯ ಗಂಗಮ್ಮ ಹಾಗೂ ವಾಡಿಯ ರೇಣುಕಾ–3; 9 ಎಂಎಂ ಪಿಸ್ತೂಲ್‌ ಶೂಟಿಂಗ್‌ (ಪಿಎಸ್‌ಐ): ಚಿಂಚೋಳಿಯ ಗಂಗಮ್ಮ–1, ಎಫ್‌ಪಿಬಿಯ ಪದ್ಮಾವತಿ–2, ವಾಡಿಯ ರೇಣುಕಾ ಹಾಗೂ ಡಿಜಿಪುರ ಸಂಗೀತಾ–3; 7.62 ರೈಫಲ್‌ ಶೂಟಿಂಗ್ (ಪಿಎಸ್‌ಐ): ಎಫ್‌ಪಿಬಿಯ ಪದ್ಮಾವತಿ–1, ಚಿಂಚೋಳಿಯ ಗಂಗಮ್ಮ–2, ರೇವೂರಿನ ವಾತ್ಸಲ್ಯ–3.

ಕಲಬುರಗಿಯಲ್ಲಿ ಭಾನುವಾರ ತೆರೆ ಕಂಡ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸಮಗ್ರ ಚಾಂಪಿಯನ್‌ ಆದ ಡಿಎಆರ್‌ ಘಟಕದ ಆಟಗಾರರು ಸಂಭ್ರಮ... ಈಶಾನ್ಯ ವಲಯ ಡಿಐಜಿಪಿ ಶಾಂತನು ಸಿನ್ಹಾ ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣವರ ಡಿಎಆರ್‌ ಡಿವೈಎಸ್ಪಿ ಶರಣಪ್ಪ ಎಚ್‌.ಎಸ್‌ ಸೇರಿದಂತೆ ಹಲವು ಅಧಿಕಾರಿಗಳು ಇದ್ದಾರೆ –ಪ್ರಜಾವಾಣಿ ಚಿತ್ರ

ಉದಯಕುಮಾರ ಮಿಂಚಿನ ಓಟಗಾರ

‘ಸೆಲೆಬ್ರಿಟಿ’ ಕ್ರೀಡಾಪಟು ಎನಿಸಿರುವ ಡಿಎಆರ್‌ ಘಟಕದ ಹೆಡ್‌ಕಾನ್‌ಸ್ಟೆಬಲ್‌ ಉದಯಕುಮಾರ್‌ 100 ಮೀ ಓಟದ ಸ್ಪರ್ಧೆಯಲ್ಲಿ ಜೊತೆಗಾರರನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದರು. ಡಿಎಆರ್‌ ಸೋಹೆಲ್‌ ಎರಡನೇ ಸ್ಥಾನ ಹಾಗೂ ಅಫಜಲಪುರದ ಕಾಶೀನಾಥ ಮೂರನೇ ಸ್ಥಾನ ಪಡೆದರು. ಉದಯಕುಮಾರ ಹಾಗೂ ಸೋಹೆಲ್‌ ಕ್ರೀಡಾಕೂಟದ 200 ಮೀ ಓಟದಲ್ಲೂ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.