ADVERTISEMENT

ಸ್ವಸ್ಥ ಬದುಕಿಗೆ ನಿಸ್ವಾರ್ಥ ಸೇವೆ ಅಗತ್ಯ: ಡಾ. ಎಸ್.ಎಸ್. ಗುಬ್ಬಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 13:25 IST
Last Updated 3 ಜುಲೈ 2021, 13:25 IST
ವೈದ್ಯರ ಮತ್ತು ಪತ್ರಿಕಾ ದಿನಾಚರಣೆಯ ಅಂಗವಾಗಿ ಕನ್ನಡ ಭವನದ ಆವರಣದಲ್ಲಿ ಹಿರಿಯ ವೈದ್ಯ ಡಾ. ಎಸ್‌.ಎಸ್. ಗುಬ್ಬಿ ಅವರು ಸಸಿಗೆ ನೀರೆರೆದರು. ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ದೌಲತರಾಯ ಮಾಲಿಪಾಟೀಲ, ಸಿದ್ಧಾರ್ಥ ಚಿಮ್ಮಾಈದಲಾಯಿ ಇದ್ದರು
ವೈದ್ಯರ ಮತ್ತು ಪತ್ರಿಕಾ ದಿನಾಚರಣೆಯ ಅಂಗವಾಗಿ ಕನ್ನಡ ಭವನದ ಆವರಣದಲ್ಲಿ ಹಿರಿಯ ವೈದ್ಯ ಡಾ. ಎಸ್‌.ಎಸ್. ಗುಬ್ಬಿ ಅವರು ಸಸಿಗೆ ನೀರೆರೆದರು. ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ದೌಲತರಾಯ ಮಾಲಿಪಾಟೀಲ, ಸಿದ್ಧಾರ್ಥ ಚಿಮ್ಮಾಈದಲಾಯಿ ಇದ್ದರು   

ಕಲಬುರ್ಗಿ: ಸಮಾಜದ ಸ್ವಸ್ಥ ಬದುಕಿಗಾಗಿ ವೈದ್ಯರ, ಪತ್ರಿಕೆಗಳ ಮತ್ತು ನಿಸ್ವಾರ್ಥ ಸೇವಕರ ಪಾತ್ರ ಬಹು ಮುಖ್ಯವಾಗಿದೆ ಎಂದು ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಎಸ್.ಎಸ್. ಗುಬ್ಬಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ ಕನ್ನಡ ಭವನದಲ್ಲಿ ಆಯೋಜಿಸಿದ್ದ ವೈದ್ಯರ, ಪತ್ರಕರ್ತರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸೇವೆಯ ಅಥ೯ ಅತ್ಯಮೂಲ್ಯ ವಾಗಿದೆ. ಅದನ್ನು ದುಬ೯ಳಕೆಯಾಗದಂತೆ ತಡೆಯುವುದು ಸಮಾಜದ ಜವಾಬ್ದಾರಿ. ವೈದ್ಯಕೀಯ ಕ್ಷೇತ್ರ ಈ ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ಮಾಡಿದ ಸೇವೆ ದಾಖಲಾಗಿ ಉಳಿಯುವಂತಾಗಿದೆ. ಅದರಲ್ಲಿ ಒಂದಿಬ್ಬರ ತಪ್ಪಿನಿಂದ ಜೀವದ ಹಂಗು ತೊರೆದು ಶ್ರಮಿಸಿದವರಿಗೂ ಅಘಾತ ಗೊಳಿಸುವಂತಾಗಿರುವುದು ದುಃಖಕರ ಸಂಗತಿ’ ಎಂದು ಬೇಸರಿಸಿದರು.

ADVERTISEMENT

‘ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗ ತನ್ನ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡು ಸ್ವಸ್ಥ ಸಮಾಜಕ್ಕಾಗಿ ಶ್ರಮಿಸುತ್ತಿದೆ’ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ‘ಸಮಾಜ , ಪರಿಷತ್ತಿನ ಸದಸ್ಯರು ಪ್ರೋತ್ಸಾಹಿಸುತ್ತಿದ್ದಾರೆ. ಅದಕ್ಕಾಗಿ ನಾನು ಶ್ರಮಿಸುತ್ತಿದ್ದೇನೆ' ಎಂದರು.

ದೌಲತರಾಯ ಮಾಲಿ ಪಾಟೀಲ ಸ್ವಾಗತಿಸಿದರು, ಕುಟುಂಬದ ಸದಸ್ಯರು ಹಾಜರಿದ್ದರು.

ಸಂಗೀತ ಕಲಾವಿದ ಸಿದ್ಧಾಥ೯ ಚಿಮ್ಮಾಈದಲಾಯಿ, ವಕೀಲರಾದ ರಮೇಶ ಕಡಾಳೆ, ಅಣವೀರ ಹಂಡಿ, ವಿಠ್ಠಲ ಮಹಾಗಾಂವ, ಲಿಂಗರಾಜ ಸಿರಗಾಪೂರ, ಗುರುಲಿಂಗ ಟೆಂಗಳಿ, ಸಾಹಿತಿಗಳಾದ ಹಣಮಂತರಾಯ ಮಂಗಾಣೆ, ಎಸ್.ಎಸ್. ಹತ್ತಿ, ಶರಣು ಕಟ್ಟಿ, ಜೈಭೀಮ ಕೋಗನೂರ, ಆನಂದ ನಂದೂರಕರ್, ಸಾಜೀದ ರಂಜೋಳಕರ್ ಇದ್ಧರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.