ADVERTISEMENT

ವಾಟ್ಸ್‌ಆ್ಯಪ್‌ನಿಂದ ರಂಗ ಕಾರ್ಯಗಳಿಗೆ ಧಕ್ಕೆ: ಪ್ರೊ.ಎಚ್.ಎಂ.ಮಹೇಶ್ವರಯ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 13:12 IST
Last Updated 2 ಸೆಪ್ಟೆಂಬರ್ 2018, 13:12 IST
ಅಂತಿಗೊನೆ ನಾಟಕ ಪ್ರದರ್ಶನವನ್ನು ಪ್ರೊ.ಎಚ್.ಎಂ.ಮಹೇಶ್ವರಯ್ಯ ಉದ್ಘಾಟಿಸಿದರು
ಅಂತಿಗೊನೆ ನಾಟಕ ಪ್ರದರ್ಶನವನ್ನು ಪ್ರೊ.ಎಚ್.ಎಂ.ಮಹೇಶ್ವರಯ್ಯ ಉದ್ಘಾಟಿಸಿದರು   

ಕಲಬುರ್ಗಿ: ‘ವಾಟ್ಸ್‌ಆ್ಯಪ್‌, ಮೊಬೈಲ್‌ಗಳಿಂದಾಗಿ ರಂಗಭೂಮಿ ಚಟುವಟಿಕೆಗಳಿಗೆ ಧಕ್ಕೆಯಾಗುತ್ತಿದೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ.ಮಹೇಶ್ವರಯ್ಯ ಹೇಳಿದರು.

ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ‘ಜನರಂಗ’ ಕಲಾ ತಂಡ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ‘ಅಂತಿಗೊನೆ’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಿನಿಮಾ, ಟಿ.ವಿಗಳಿಂದಾಗಿ ಜನರಲ್ಲಿ ನಾಟಕ ನೋಡುವ ಆಸಕ್ತಿ ಕಡಿಮೆಯಾಗುತ್ತಿದೆ. ಧಾರವಾಡದಂತೆ ಕಲಬುರ್ಗಿಯಲ್ಲೂ ರಂಗ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದರು.

ADVERTISEMENT

ರಂಗ ನಿರ್ದೇಶಕ ಶಂಕ್ರಯ್ಯ ಘಂಟಿ ಮಾತನಾಡಿ, ‘ನನ್ನ ತಾಯಿಯ ಸ್ಮರಣಾರ್ಥವಾಗಿ 18 ವರ್ಷಗಳಿಂದ ನಾಟಕೋತ್ಸವವನ್ನು ಆಯೋಜಿಸುತ್ತ ಬಂದಿದ್ದೇನೆ. ನನ್ನ ತಾಯಿ ಜೀವನಾನುಭವದ ಪಾಠ ಕಲಿಸುವ ಮೂಲಕ ರಂಗಜೀವನದ ಏಳಿಗೆಗೆ ದಾರಿಮಾಡಿಕೊಟ್ಟಳು’ ಎಂದು ಸ್ಮರಿಸಿಕೊಂಡರು.

ಹಿರಿಯ ಪತ್ರಕರ್ತ ಪಿ.ಎಂ.ಮಣ್ಣೂರ ಅಧ್ಯಕ್ಷತೆ ವಹಿಸಿದ್ದರು. ದಿ. ಗೌರಮ್ಮ ರುದ್ರಯ್ಯ ಘಂಟಿ ಅವರ ಸ್ಮರಣಾರ್ಥ ನಡೆದ ನಾಟಕ ಪ್ರದರ್ಶನ ಸಮಾರಂಭದಲ್ಲಿ ಹಿರಿಯ ರಂಗಚೇತನ, ರಾಯಚೂರಿನ ವೀರಭದ್ರಪ್ಪ ಅಕ್ಕಿ ಅವರನ್ನು ಸನ್ಮಾನಿಸಲಾಯಿತು.

ವೈದ್ಯ ಸಾಹಿತಿ ಡಾ.ಎಸ್.ಎಸ್.ಗುಬ್ಬಿ ಸ್ವಾಗತಿಸಿದರು. ಉಪನ್ಯಾಸಕ ಬಿ.ಎಚ್.ನಿರಗುಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.