
ಪ್ರಜಾವಾಣಿ ವಾರ್ತೆ
ಅಫಜಲಪುರ: ತಾಲ್ಲೂಕಿನ ಸಂಗಾಪುರ ಗ್ರಾಮದ ವಾಹನ ಚಾಲಕ ಯುವಕ ಜಾವೀದ್ ಚಿನಮಳ್ಳಿ(33) ಅವರ ಮೃತದೇಹ ಮೇ 10ರಂದು ಗ್ರಾಮದ ಹೊರವಲಯದ ಜಮೀನಿನ ಬಾವಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕೊಲೆಯಾದ ವ್ಯಕ್ತಿಯ ತಂದೆ ಲಾಳೆಸಾಬ ಹುಸೇನಸಾಬ ಚಿನಮಳ್ಳಿ ಅವರು ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
‘ನನ್ನ ಮಗ ಜಾವೇದ್ ಮೇ 8ರಂದು ಸಂಜೆ ಹೊರಹೋಗಿದ್ದ. ಆದರೆ ಮರಳಿ ಬಂದಿರುವುದಿಲ್ಲ’ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಸಿಪಿಐ ಚೆನ್ನಯ್ಯ ಹಿರೇಮಠ, ಪಿಎಸ್ಐ ಪರಶುರಾಮ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ. ಈ ಕುರಿತು ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.