ರಘುನಾಥ ಜಾಧವ
ಕಾಳಗಿ: ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ದುಬೈನಲ್ಲಿ ತಾಲ್ಲೂಕಿನ ಸೂಗೂರು (ಕೆ) ತಾಂಡಾದ ಯುವಕ ರಘುನಾಥ ಉದಯಕುಮಾರ್ ಜಾಧವ (37) ಜುಲೈ 13ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಾಜಿ ಸಂಸದ ಡಾ.ಉಮೇಶ ಜಾಧವ ಅವರ ಅಣ್ಣನ ಮೊಮ್ಮಗ, ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಓದಿದ್ದ ರಘುನಾಥ ಜಾಧವ ಮೂರು ವರ್ಷಗಳಿಂದ ದುಬೈನಲ್ಲಿ ನೆಲೆಸಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಬರುವ ಆಗಸ್ಟ್‌ನಲ್ಲಿ ಸ್ವದೇಶಕ್ಕೆ ವಾಪಸಾಗಬೇಕಿತ್ತು.
ಅಂತ್ಯಕ್ರಿಯೆ ಶುಕ್ರವಾರ (ಜು.18) ಮಧ್ಯಾಹ್ನ 1ಕ್ಕೆ ಸ್ವಗ್ರಾಮ ಸುಗೂರ (ಕೆ) ತಾಂಡಾದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.