ಸೇಡಂ: ನಾಡ ಹಬ್ಬ ದಸರಾ ಉತ್ಸವು ಪ್ರತಿಯೊಬ್ಬರಲ್ಲಿಯೂ ನಾವೆಲ್ಲ ಒಂದು-ಬಂಧು ಎನ್ನುವ ಭಾವ ಬೆಸೆಯಲಿ ಎಂದು ತೇಲ್ಕೂರ ಪಾಟೀಲ ಫೌಂಡೇಶನ್ ಅಧ್ಯಕ್ಷೆ ಸಂತೋಷಿರಾಣಿ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ಚೌರಸ್ತಾ ಬಳಿಯ ಕೋಲಿವಾಡ ಬಡಾವಣೆಯಲ್ಲಿ ಶಿವಸೇನಾ ದಸರಾ ಉತ್ಸವ ಸಮಿತಿ ಆಯೋಜಿಸಿದ್ದ 31ನೇ ದಸರಾ ಉತ್ಸವದ ಗರ್ಭಾ ನೃತ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ವೆತಾ ವೀರೇಂದ್ರ ರುದ್ನೂರ, ನಿಸರ್ಗ ಆಸ್ಪತ್ರೆಯ ತಜ್ಞ ವೈದ್ಯ ರೇಖಾ ಶ್ರೀನಿವಾಸ ಮೊಕದಮ್ ಮಾತನಾಡಿದರು.
ಮಹಿಳಾ ಪ್ರಮುಖ ಸುನಿತಾ ಬಸವರಾಜ ಪಾಟೀಲ ಊಡಗಿ ಅಂಭಾಭವಾನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗರ್ಭಾ ನೃತ್ಯ ಸಂಭ್ರಮವನ್ನು ಉದ್ಘಾಟಿಸಿದರು.
ಶಿವಸೇನಾ ದಸರಾ ಉತ್ಸವ ಸಮಿತಿ ಮಹಿಳಾ ಪ್ರಮುಖ ಇಂದುಬಾಯಿ ಎಸ್. ಬಾಗೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯೆ ಸಕ್ಕುಬಾಯಿ ರಾಮದಾಸ್ ಪವಾರ, ರೂಪಾ ಐನಾಪುರ, ವಿಜಯರಾಣಿ ವೆಂಕಟಚಾರಿ ತಾಡೂರ, ರೇಖಾ ಶ್ರೀನಿವಾಸ ಮೊಕದಮ್ ಇದ್ದರು.
ಕಾರ್ಯಕ್ರಮದಲ್ಲಿ ಗರ್ಬಾ ನೃತ್ಯ ತರಬೇತಿ ನೀಡಿದ ಶೃತಿ ಮತ್ತು ಶ್ವೇತಾ ಅವರನ್ನು ಸತ್ಕರಿಸಲಾಯಿತು. ಸಮೃತಾ ತೊಟ್ನಳ್ಳಿ ನೃತ್ಯ ಪ್ರದರ್ಶಿಸಿದರು. ಅನನ್ಯ ಭೋವಿ ಪ್ರಾರ್ಥಿಸಿದರು. ಶಶಿಕಲಾ ಸಾಬಣ್ಣ ತೊಟ್ನಳ್ಳಿ ಸ್ವಾಗತಿಸಿದರು. ಜಗದೀಶ್ವರಿ ಯರಗೋಳ
ನಿರೂಪಿಸಿದರು. ಅಂಬಿಕಾ ಲಕ್ಷ್ಮಣ ಭೋವಿ ವಂದಿಸಿದರು.
ಶಿವಸೇನಾ ದಸರಾ ಉತ್ಸವ ಸಮಿತಿಯವರು ದಸರಾ ಉತ್ಸವದಲ್ಲಿ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ ಗುರುತಿಸಿ ಸತ್ಕರಿಸಿ ಅವರನ್ನು ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ ಇಂದುಬಾಯಿ ಎಸ್. ಬಾಗೋಡಿ ಶಿವಸೇನಾ ದಸರಾ ಉತ್ಸವ ಸಮಿತಿ ಮಹಿಳಾ ಪ್ರಮುಖರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.