ADVERTISEMENT

ಸಮುದಾಯದ ಅಭಿವೃದ್ಧಿಗೆ ಈಡಿಗ ಟ್ರಸ್ಟ್ ಸ್ಥಾಪನೆ: ವಿಖ್ಯಾತಾನಂದ ಸ್ವಾಮೀಜಿ

ಬ್ರಹ್ಮಶ್ರೀ ನಾರಾಯಣಗುರು ಮಠದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 20:16 IST
Last Updated 12 ಜೂನ್ 2022, 20:16 IST

ಕಲಬುರಗಿ: ‘ಆರ್ಯ ಈಡಿಗ ಸಮುದಾ ಯದ ಕಟ್ಟಕಡೆಯ ಮಗುವಿಗೂ ಉನ್ನತ ಶಿಕ್ಷಣ ಹಾಗೂ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಈಡಿಗ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಲಾಗುವುದು’ ಎಂದು ಸೋಲೂರಿನ ರೇಣುಕಾ ಪೀಠ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಮಠದಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ನಗರದಲ್ಲಿ ಜೆ.ಪಿ ನಾರಾಯಣಸ್ವಾಮಿ ಪ್ರತಿಷ್ಠಾನದ ವತಿಯಿಂದ ಭಾನುವಾರ ನಡೆದ ಕಾರ್ಯಕ್ರಮದಲ್ಲಿಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮತ್ತು ಪ್ರೋತ್ಸಾಹ ಧನದ ಚೆಕ್ ವಿತರಿಸಿ ಅವರು ಮಾತನಾಡಿದರು.

‘ಈಡಿಗ (ಇಡಿಐಜಿಎ) ಟ್ರಸ್ಟ್‌ ಅಡಿ ಸಮುದಾಯದ 2 ಲಕ್ಷ ಜನರನ್ನು ಸದಸ್ಯರನ್ನಾಗಿಸುವ ಗುರಿ ಇದೆ.₹ 250 ಕೊಟ್ಟು ಸದಸ್ಯರಾದವರಿಗೆ ದಿನಕ್ಕೆ ₹ 1 ವಾಪಸ್ ಕೊಡುತ್ತೇವೆ. ಸಂಗ್ರಹವಾದ ಹಣವನ್ನು ಉದ್ಯಮ ಸ್ಥಾಪನೆ, ವಾಹನ ಖರೀದಿ, ಮನೆ ನಿರ್ಮಾಣಕ್ಕಾಗಿ ಶೇ 4ರ ಬಡ್ಡಿದರದಲ್ಲಿ ನೀಡಲಾಗುವುದು’ ಎಂದರು.

ADVERTISEMENT

‘ಸೇಂದಿ ಇಳಿಸುವ ಕುಲಕಸುಬು ತೆಗೆದುಹಾಕಿದ ನಂತರ ಈಡಿಗ ಸಮುದಾಯ ತೀವ್ರ ತೊಂದರೆಗೆ ಒಳಗಾಗಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಆಗುತ್ತಿಲ್ಲ.ಹೀಗಾಗಿ, ಟ್ರಸ್ಟ್‌ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಶಾಲೆಗಳನ್ನು ತೆರೆಯುತ್ತೇವೆ. ಈಗಾಗಲೇ ಕಾರವಾರ, ಶಿವಮೊಗ್ಗ, ಕೊಡಗಿನಲ್ಲಿ ಜಾಗ ಇದೆ. ಶೀಘ್ರವೇ ಯಾದಗಿರಿಯಲ್ಲಿ ಶಾಲೆ ಸ್ಥಾಪಿಸುತ್ತೇವೆ’ ಎಂದು ಟ್ರಸ್ಟ್‌ನಿಂದ ಹಮ್ಮಿಕೊಂಡ ಚಟುವಟಿಕೆಗಳ ಮಾಹಿತಿ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.