ADVERTISEMENT

ವಚನ ಸಾಹಿತ್ಯ ಜಗತ್ತಿಗೆ ಪಸರಿಸಿದ ಫ.ಗು ಹಳಕಟ್ಟಿ: ಗವಿಸಿದ್ದಪ್ಪ ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 15:27 IST
Last Updated 6 ಅಕ್ಟೋಬರ್ 2023, 15:27 IST
ಚಿಂಚೋಳಿ ತಾಲ್ಲೂಕಿನ ಸುಲೇಪೇಟದ ನಿವೃತ್ತ ಶಿಕ್ಷಕಿ ಲಿಂ. ಜಗದೇವಿ ಹಣಮಂತರಾವ್ ಬೇಮಳಗಿ ಸ್ಮರಣಾರ್ಥ ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬಸವರಾಜ ಬೆಳಕೇರಿ, ಬಸವಣ್ಣಪ್ಪ ಮುಚ್ಚಟ್ಟಿ, ಹಾಗೂ ಕಲ್ಲಾಲಿಂಗ ಆರ್. ಅವರನ್ನು ಸನ್ಮಾನಿಸಿದರು
ಚಿಂಚೋಳಿ ತಾಲ್ಲೂಕಿನ ಸುಲೇಪೇಟದ ನಿವೃತ್ತ ಶಿಕ್ಷಕಿ ಲಿಂ. ಜಗದೇವಿ ಹಣಮಂತರಾವ್ ಬೇಮಳಗಿ ಸ್ಮರಣಾರ್ಥ ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಬಸವರಾಜ ಬೆಳಕೇರಿ, ಬಸವಣ್ಣಪ್ಪ ಮುಚ್ಚಟ್ಟಿ, ಹಾಗೂ ಕಲ್ಲಾಲಿಂಗ ಆರ್. ಅವರನ್ನು ಸನ್ಮಾನಿಸಿದರು   

ಚಿಂಚೋಳಿ: ಸಂಶೋಧಕರಾದ ಡಾ. ಫ. ಗು ಹಳಕಟ್ಟಿಯವರು ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು. ಅವರಿಂದಾಗಿ‌ ವಚನ ಸಾಹಿತ್ಯ ಜಾಗತಿಕ ಮನ್ನಣೆ ಪಡೆದಿದೆ ಎಂದು ಸಾಹಿತಿ ಗವಿಸಿದ್ದಪ್ಪ ಪಾಟೀಲ ತಿಳಿಸಿದರು.

ತಾಲ್ಲೂಕಿನ ಸುಲೇಪೇಟದ ಖಟ್ವಾoಗೇಶ್ವರ ಮಠದಲ್ಲಿ ಈಚೆಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಆಯೋಜಿಸಿದ ಲಿಂ. ಜಗದೇವಿ ಹನುಮಂತಪ್ಪ ಬೇಮಳಗಿಯವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಅನುಭವ ಮಂಟಪ ಸ್ಥಾಪನೆಯ ಉದ್ದೇಶ, ಕನ್ನಡಿಗರು ಶರಣರ ಸಾಮಾಜಿಕ ಚಿಂತನೆ, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ, ಕನ್ನಡ ನಾಡು ಇನ್ನೂ ಶ್ರೇಷ್ಠವಾಗುತ್ತದೆ’ ಎಂದರು.‌

ADVERTISEMENT

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆ ಹಾಗೂ ಚಿಟಗುಪ್ಪಾದ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಡಾ. ಜಯದೇವಿ ಗಾಯಕ್ವಾಡ, ನಿವೃತ್ತ ಉಪನ್ಯಾಸಕ ರೇವಣಸಿದ್ದಪ್ಪ ದುಕಾನ ಮಾತನಾಡಿದರು. ವೇದಿಕೆಯಲ್ಲಿ ದತ್ತಿ ಸ್ಥಾಪಕರಾದ ನಿವೃತ್ತ ಶಿಕ್ಷಕ ಹನುಮಂತಪ್ಪ ಬೇಮಳಗಿ ಉಪಸ್ಥಿತರಿದ್ದರು. ಪರಿಷತ್ತಿನ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಬಸವರಾಜ ಐನೋಳಿ ಪ್ರಾಸ್ತಾವಿಕ ಮಾತನಾಡಿದರು. ಮಹೇಶ ಬೇಮಳಗಿ ಸ್ವಾಗತಿಸಿದರು. ಉತ್ತಮ ದೊಡ್ಡಮನಿ ನಿರೂಪಿಸಿದರು.

ವೀರೇಶ ಬೇಮಳಗಿ ವoದಿಸಿದರು. ಇದೇ ಸಂದರ್ಭದಲ್ಲಿ ಬಸವರಾಜ ಬೆಳಕೇರಿ, ಬಸವಣ್ಣಪ್ಪ ಮುಚ್ಚಟ್ಟಿ, ಹಾಗೂ ಕಲ್ಲಾಲಿಂಗ ಆರ್. ಅವರನ್ನು ಸನ್ಮಾನಿಸಲಾಯಿತು. ಗವಾಯಿಗಳಾದ ಶರಣಯ್ಯ ಸ್ವಾಮಿ ಅಲ್ಲಾಪುರ ಹಾಗೂ ಗುರುರಾಜ ಜೋಶಿ ವಚನ ಸಂಗೀತ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮಾಣಿಕರಾವ ಪಸಾರ, ಶಾಂತಕುಮಾರ ಯಾಲಕ್ಕಿ, ಮಾಣಿಕರಾವ ಗುಲಗುಂಜಿ, ತಾರಕೇಶ್ವರಿ ವೀರಭದ್ರಪ್ಪ ತಾರಾಪುರ, ಬಸವರಾಜೇಶ್ವರಿ ಚನ್ನಬಸಪ್ಪ ಪಸಾರ, ಸೇರಿ ಅನೇಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.