ADVERTISEMENT

ಗ್ರಾ.ಪಂ. ಸದಸ್ಯತ್ವ ಹರಾಜು: 10 ಜನರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 16:10 IST
Last Updated 8 ಡಿಸೆಂಬರ್ 2020, 16:10 IST

ಕಲಬುರ್ಗಿ: ಯಡ್ರಾಮಿ ತಾಲ್ಲೂಕಿನ ಬಿಳವಾರ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ನಿಯಮಬಾಹಿರವಾಗಿ ಹರಾಜು ಹಾಕಿದ ಆರೋಪದ ಮೇರೆಗೆ ಗ್ರಾಮದ 6 ಜನ ಮುಖಂಡರು ಮತ್ತು ಹಣ ನೀಡಿ ಆ ಸ್ಥಾನ ಪಡೆಯಲು ಮುಂದಾಗಿದ್ದ ನಾಲ್ವರ ವಿರುದ್ಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿಉಪ ತಹಶೀಲ್ದಾರ್‌ ನಾಗೇಂದ್ರಪ್ಪ‌ ಪಾಟೀಲ ದೂರು ದಾಖಲಿಸಿದ್ದಾರೆ.

‘ಬಿಳವಾರ ಗ್ರಾಮದ ಮುಖಂಡರಾದ ಹೊನ್ನಪ್ಪ ಕೊಡಮನಹಳ್ಳಿ, ರಾಮನಗೌಡ ನಾಗರಳ್ಳಿ, ಮಡಿವಾಳಪ್ಪ ಪಡಶೆಟ್ಟಿ, ಮಲ್ಲನಗೌಡ ಕೋಡಮನಹಳ್ಳಿ, ಗೌಡಪ್ಪ ಬೊಮ್ಮನಹಳ್ಳಿ, ಬಸಪ್ಪಗೌಡ ನವಣಿ ಇವರು ಚುನಾವಣೆ ನಡೆಯದಂತೆ ಪ್ರಜಾ ಪ್ರತಿನಿಧಿ ಕಾಯ್ದೆ ಉಲ್ಲಂಘನೆ ಮಾಡಿ ಹರಾಜು ಪ್ರಕ್ರಿಯೆ ನಡೆಸಿದ್ದರು.ಗೊಲ್ಲಾಳಪ್ಪ ಮ್ಯಾಗೇರಿ, ಹಣಮಂತ ಭೋವಿ, ಹಣಮಂತರಾಯ ದೊರೆ ಹಾಗೂ ಬಬ್ರುವಾಹನ ಭೋವಿ ಇವರು ಈ ಸ್ಥಾನಗಳಿಗೆ ಆಯ್ಕೆಯಾಗಲು ಒಟ್ಟಾರೆ₹ 26.55 ಲಕ್ಷ ನೀಡಲು ನಿರ್ಧರಿಸಿದ್ದರು.ಹೀಗಾಗಿ ಇವರ ವಿರುದ್ಧ ‍ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.

ಯಡ್ರಾಮಿ ತಾಲ್ಲೂಕಿನ ಬಿಳವಾರ ಗ್ರಾಮ ಪಂಚಾಯಿತಿಗೆ ಇದೇ 27ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

‘ಪ್ರಜಾವಾಣಿ’ ಈ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.