ಕಲಬುರ್ಗಿ: ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರು ಹಾಗೂ ಪುರೋಹಿತ ವೃತ್ತಿ ಮಾಡುವವರಿಗೆ ಉದ್ಯಮಿ ಕೃಷ್ಣಾಜಿ ಕುಲಕರ್ಣಿ ಅವರು ಸೊಮವಾರ ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿದರು.
ನಗರದ ಜಗತ್ ವೃತ್ತದ ಬಸವೇಶ್ವರ ಪ್ರತಿಮೆ ಬಳಿ ನಡೆದ ಕಾರ್ಯಕ್ರಮದಲ್ಲಿ ಕಿಟ್ ವಿತರಿಸಿ ಮಾತನಾಡಿದ ಅವರು, ಸಮಾಜದ ಸರ್ವ ಜನತೆಯ ಹಿತ ಕಾಯುವ ಅರ್ಚಕರ ಹಾಗೂ ಪುರೋಹಿತರ ಕುರಿತು ಚಿಂತಿಸುವುದು ತುರ್ತು ಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ವೆಂಕಟೇಶ ಪಾಟೀಲ ಮಳಖೇಡ, ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯಕಾರಿಣಿ ಸದಸ್ಯ ನಾಗಲಿಂಗಯ್ಯ ಮಠಪತಿ, ಚಂದ್ರಕಾಂತ ದೇಶಮುಖ, ಗೋಪಾಲ ಮಳಖೇಡ, ಗುರುಲಿಂಗಯ್ಯ ಶಾಸ್ತ್ರಿ ಹಿತ್ತಲಶಿರೂರ, ಶಿವಕವಿ ಹಿರೇಮಠ ಜೋಗೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.