ವಾಡಿ ಸಮೀಪದ ಕಡಬೂರ ಗ್ರಾಮದಲ್ಲಿ ಶನಿವಾರ ಜರುಗಿದ ಉಚಿತ ಅರೋಗ್ಯ ತಪಾಸಣೆ ಶಿಬಿರದಲ್ಲಿ ವೈದ್ಯ ತಂಡ ಸಾರ್ವಜನಿಕರ ಆರೋಗ್ಯ ಪರಿಶೀಲನೆ ನಡೆಸಿತು
ವಾಡಿ: ಭೀಮಾನದಿಯ ಪ್ರವಾಹಕ್ಕೆ ತುತ್ತಾಗಿದ್ದ ಕಡಬೂರ ಮತ್ತು ಕುಂದನೂರು ಗ್ರಾಮದಲ್ಲಿ ಮೆಡಿಕಲ್ ಸರ್ವಿಸ್ ಸೆಂಟರ್ ಮತ್ತು ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ಅರೋಗ್ಯ ಮತ್ತು ನೇತ್ರ ಪರೀಕ್ಷೆ ತಪಾಸಣಾ ಶಿಬಿರ ಜರುಗಿತು.
ಮೆಡಿಕಲ್ ಸರ್ವಿಸ್ ಸೆಂಟರ್ ರಾಜ್ಯ ಕಾರ್ಯದರ್ಶಿ ಡಾ. ವಸುದೇಂದ್ರ ನೇತೃತ್ವದಲ್ಲಿ ಎರಡು ಗ್ರಾಮದಲ್ಲಿ ಎರಡು ನೂರಕ್ಕೂ ಅಧಿಕ ಜನರ ಅರೋಗ್ಯ ಮತ್ತು ನೇತ್ರ ತಪಾಸಣೆ ನಡೆಸಲಾಯಿತು.
ಪ್ರವಾಹ ತಗ್ಗಿದ ನಂತರ ಎದುರಾದ ಮಲೇರಿಯಾ, ಚರ್ಮರೋಗ, ವಾಂತಿ ಬೇಧಿ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳಿಂದ ಬಳಲಿದ ಮಕ್ಕಳು, ಮಹಿಳೆಯರು, ವೃದ್ಧರು ವೈದ್ಯರ ಸಲಹೆ ಪಡೆದು ಮಾತ್ರೆ ಔಷಧಗಳನ್ನು ಪಡೆದುಕೊಂಡರು.
ಮೆಡಿಕಲ್ ಸರ್ವಿಸ್ ಸೆಂಟರ್‌ನ ಡಾ.ಸೀಮಾ ದೇಶಪಾಂಡೆ ಮಾತನಾಡಿ, ‘ಭೀಮಾನದಿ ಮತ್ತು ಕಾಗಿಣಾ ನದಿಗಳ ಪ್ರವಾಹದಿಂದ ಕಲಬುರಗಿ ಜಿಲ್ಲೆಯ ಹಲವು ನದಿ ದಂಡೆಗಳ ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು ಸಾಂಕ್ರಾಮಿಕ ರೋಗದ ಭೀತಿ ಇಲ್ಲಿ ಉಂಟಾಗಿದೆ. ಹೀಗಾಗಿ ಇಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದ್ದು ಸ್ವಾತರ್ಹ’ ಎಂದರು.
ಅಖಿಲ ಭಾರತ ಕೃಷಿ ಕಾರ್ಮಿಕ ಸಂಘಟನೆ ರಾಜ್ಯ ಅಧ್ಯಕ್ಷ ಎಂ. ಶಶಿಧರ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ವೀರಭದ್ರಪ್ಪ ಆರ್.ಕೆ, ತಾಲ್ಲೂಕು ವೈದ್ಯಾಧಿಕಾರಿ ವೀರನಾಥ, ಗ್ರಾಪಂ ಅಧ್ಯಕ್ಷ ಬಾಸುಮಿಯ್ಯಾ ಹೊಸಮನಿ, ಆರೋಗ್ಯ ಕ್ಷೇತ್ರಾಧಿಕಾರಿ ಮಂಜುಳಾ ಬುಳ್ಳಾ, ಸ್ಥಳೀಯ ಮುಖಂಡ ಹಣಮಂತ ಚವ್ಹಾಣ, ಆಯುಷ್ ವೈದ್ಯಾಧಿಕಾರಿ ಕರುಣಾ ಕಾಂಬಳೆ, ವೈದ್ಯರಾದ ಡಾ.ದಿವ್ಯಾ.ಪಿ, ಡಾ. ವರ್ಷಾ ಆರ್.ಬಿ, ಡಾ. ಉಪೇಂದ್ರ.ಎನ್, ಡಾ. ಎಸ್.ಕೆ. ಶರತಕುಮಾರ, ಮುಖಂಡರಾದ ಶ್ರೀಶೖಲ್ ಕೆಂಚಗುಂಡಿ, ವೆಂಕಟೇಶ ದೇವದುರ್ಗ, ವಿಠ್ಠಲ ರಾಠೋಡ, ಶರಣು ಹೇರೂರ, ಮಹೇಶ ನಾಡಗೌಡ, ಗೌತಮ ಪರ್ತೂರಕರ, ವೆಂಕಟೇಶ ದೇವದುರ್ಗ, ಗೋದಾವರಿ ಕಾಂಬಳೆ, ಸಿದ್ದಪ್ಪ, ಗೊವಿಂದ ಯಳವಾರ, ರಾಜು ಒಡೆಯರಾಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.