ADVERTISEMENT

ಕಲಬುರ್ಗಿ: 500 ಜನರಿಗೆ ಉಚಿತ ಊಟ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಮೇ 2021, 13:51 IST
Last Updated 1 ಮೇ 2021, 13:51 IST
ಚಂದು ಪಾಟೀಲ ಪ್ರತಿಷ್ಠಾನದಿಂದ ಜಿಮ್ಸ್‌ ಆಸ್ಪತ್ರೆಯಲ್ಲಿರುವ ರೋಗಿಗಳೊಂದಿಗೆ ಬಂದ ಸಹಾಯಕರಿಗೆ ಆಹಾರದ ಕಿಟ್‌ಗಳನ್ನು ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ವಿತರಿಸಿದರು. ಚಂದು ಪಾಟೀಲ ಇದ್ದರು
ಚಂದು ಪಾಟೀಲ ಪ್ರತಿಷ್ಠಾನದಿಂದ ಜಿಮ್ಸ್‌ ಆಸ್ಪತ್ರೆಯಲ್ಲಿರುವ ರೋಗಿಗಳೊಂದಿಗೆ ಬಂದ ಸಹಾಯಕರಿಗೆ ಆಹಾರದ ಕಿಟ್‌ಗಳನ್ನು ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ವಿತರಿಸಿದರು. ಚಂದು ಪಾಟೀಲ ಇದ್ದರು   

ಕಲಬುರ್ಗಿ: ಚಂದು ಪಾಟೀಲ ಪ್ರತಿಷ್ಠಾನದ ವತಿಯಿಂದ ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಹಾಗೂ ಅವರ ಪುತ್ರ, ಕರ್ನಾಟಕ ನವೀಕರಿಸಬಹುದಾದ ಇಂಧನ ಮೂಲಗಳ ನಿಗಮದ ಅಧ್ಯಕ್ಷ ಚಂದು ಪಾಟೀಲ ಅವರು ನಗರದ ಬಸವೇಶ್ವರ ಆಸ್ಪತ್ರೆ, ಜಿಮ್ಸ್‌, ಇಎಸ್‌ಐ ಆಸ್ಪತ್ರೆಗಳಿಗೆ ತೆರಳಿ 500 ಜನರಿಗೆ ಊಟದ ಪ್ಯಾಕೆಟ್ ವಿತರಿಸಿದರು.

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್ ನಿಯಮ ಜಾರಿಗೊಳಿಸಿದ್ದರಿಂದ ಕೋವಿಡ್‌ ಸೇರಿ ವಿವಿಧ ರೋಗಗಳಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಸಹಾಯಕರು ಊಟ ಇಲ್ಲದೆ ಪರದಾಡುತ್ತಿದ್ದರು. ಅದನ್ನು ಕಂಡು ಚಂದು ಪಾಟೀಲ್ ಫೌಂಡೇಷನ್ ಮೂಲಕ ಊಟದ ವ್ಯವಸ್ಥೆ ಮಾಡಲಾಯಿತು.

ಹೋಟೆಲ್‌ಗಳು ಬಂದ್ ಆಗಿ ರೋಗಿಗಳ ಜತೆ ಬಂದ ಸಹಾಯಕರಿಗೆ ಊಟದ ಸಮಸ್ಯೆ ತೀವ್ರವಾಗಿ ಕಾಡುತ್ತಿತ್ತು. ಮೂರು ದಿನದಿಂದ ಊಟ ಸಿಗದೆ ಪರದಾಡುತ್ತಿದ್ದರು. ಬಡ ಜನತೆ ನೋವಿಗೆ ಮಿಡಿಯುವ ಉದ್ದೇಶದಿಂದ ಉಟ ವಿತರಿಸಲಾಯಿತು ಎಂದು ಚಂದು ಪಾಟೀಲ ತಿಳಿಸಿದರು.

ADVERTISEMENT

ನಿತ್ಯ 500 ಊಟ: ಲಾಕ್‌ಡೌನ್‌ ಮುಗಿಯುವವರೆಗೂ ನಿತ್ಯ 500 ಊಟದ ಪ್ಯಾಕೆಟ್‌ಗಳನ್ನು ನೀಡಲಾಗುವುದು ಎಂದು ಬಿ.ಜಿ. ಪಾಟೀಲ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.