ಚಿಂಚೋಳಿ: ತಾಲ್ಲೂಕಿನ ಕುಂಚಾವರಂ ಬಳಿಯ ಕೋಹೀರ್ ತಾಂಡೂರು ಮಾರ್ಗಮಧ್ಯೆ ಮೊಗದಂಪುರ ಕ್ರಾಸ್‌ನಲ್ಲಿ ಬೈಕ್ ಮೇಲೆ ಸಾಗಿಸುತ್ತಿದ್ದ 8.53 ಕೆಜಿ ಗಾಂಜಾ ಜಪ್ತಿ ಮಾಡಿದ ಕುಂಚಾವರಂ ಪೊಲೀಸರು, ಶನಿವಾರ ಇಬ್ಬರನ್ನು ಬಂಧಿಸಿದ್ದಾರೆ.
ತೆಲಂಗಾಣದ ಮೆದಕ್ ಮೂಲದ ವೀರೇಶಂ, ಮಲ್ಲೇಶಂ ಬಂಧಿತರು. ಗಾಂಜಾ, ಬೈಕ್ ಹಾಗೂ ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ. ಸರ್ಕಲ್ ಇನ್‌ಸ್ಪೆಕ್ಟರ್ ಮಹಾಂತೇಶ ಪಾಟೀಲ ಮಾರ್ಗದರ್ಶನದಲ್ಲಿ ಕುಂಚಾವರಂ ಸಬ್ ಇನ್‌ಸ್ಪೆಕ್ಟರ್ ಉಪೇಂದ್ರಕುಮಾರ, ಮಿರಿಯಾಣ ಸಬ್ ಇನ್‌ಸ್ಪೆಕ್ಟರ್ ಸಂತೋಷ ಸಂತೋಷ ರಾಠೋಡ್ ಮತ್ತು ಸಿಬ್ಬಂದಿ ಮಲ್ಲಪ್ಪ, ಮಾಳಗೊಂಡ, ಶಿವಪ್ಪ, ಮಂಜುನಾಥ, ವಿಶ್ವನಾಥ ಕಾರ್ಯಾಚರಣೆ ನಡೆಸಿದರು.
ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜೈಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.