ADVERTISEMENT

ಕಲಬುರಗಿ | ಸಿಲಿಂಡರ್ ಸ್ಫೋಟ: ಚಿನ್ನಾಭರಣ, ನಗದು ಭಸ್ಮ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 10:50 IST
Last Updated 22 ಅಕ್ಟೋಬರ್ 2025, 10:50 IST
<div class="paragraphs"><p>ಕಲಬುರಗಿ ‌ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮೋತಕಪಲ್ಲಿಯಲ್ಲಿ ನಡೆದ‌ ಅಗ್ನ ಅವಘಡದಲ್ಲಿ‌ ಮನೆಯಲ್ಲಿನ‌ ವಸ್ತುಗಳು ಭಸ್ಮಗೊಂಡಿರುವುದು</p></div>

ಕಲಬುರಗಿ ‌ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮೋತಕಪಲ್ಲಿಯಲ್ಲಿ ನಡೆದ‌ ಅಗ್ನ ಅವಘಡದಲ್ಲಿ‌ ಮನೆಯಲ್ಲಿನ‌ ವಸ್ತುಗಳು ಭಸ್ಮಗೊಂಡಿರುವುದು

   

ಚಿಂಚೋಳಿ: ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡ ಘಟನೆ ತಾಲ್ಲೂಕಿನ ಫರ್ದಾರ ಮೋತಕಪಳ್ಳಿ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಮನೆಯಲ್ಲಿದ್ದ ನಾಲ್ವರು ಬಚಾವ್ ಆಗಿದ್ದಾರೆ. ಆದರೆ, ಅವಘಡದಲ್ಲಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಣ ಸೇರಿದಂತೆ ಅಗತ್ಯ ವಸ್ತುಗಳು ಸುಟ್ಟು ಕರಕಲಾಗಿವೆ.

ಗ್ರಾಮದ ನಾಗಮ್ಮ‌ ಕಂಟೆಪ್ಪ ಪೂಜಾರಿ ಅವರು ಮನೆಯಲ್ಲಿದ್ದಾಗಲೇ ಸಿಲಿಂಡರ್ ಸೋರಿಕೆ ವಾಸನೆಯಿಂದ ಗಮನಿಸಿದ ಮನೆಯವರು, ತಕ್ಷಣ ಮನೆಯ ಹೊರಗಡೆ ಹೋಗಿದ್ದಾರೆ. ಕೆಲವೇ ನಿಮಿಷಗಳಲ್ಲಿ‌ ಸಿಲಿಂಡರ್ ಸ್ಫೋಟಿಸಿದೆ.

ADVERTISEMENT

ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ತಗುಲಿದ ಮನೆಗೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಸುಲೇಪೇಟ್ ಪೊಲೀಸ್ ಠಾಣೆಯ ಪಿಎಸ್ಐ ಅಮರ ಕುಲಕರ್ಣಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.