ಶಹಾಬಾದ್: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕ ಘಟಕದ ನಿರ್ದೇಶಕರ ಚುನಾವಣೆಗೆ 27 ಅಭ್ಯರ್ಥಿಗಳಲ್ಲಿ 20 ಜನ ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 7 ಸ್ಥಾನಗಳಿಗೆ ಸೋಮವಾರ ಚುನಾವಣೆ ಜರುಗಿತು.
ಪ್ರೌಢಶಾಲಾ ವಿಭಾಗದಿಂದ 2 ನಿರ್ದೇಶಕರ ಸ್ಥಾನಕ್ಕೆ 4 ಜನ ಸ್ಪರ್ಧಿಸಿದ್ದರು. ಅವರಲ್ಲಿ ವೆಂಕಟೇಶ ಚಿನ್ನೂರ ಮತ್ತು ಮಾರುತಿ ಪೂಜಾರಿ ಗೆಲುವು ಸಾಧಿಸಿದರು.
ಪ್ರಾಥಮಿಕ ಶಾಲೆಯ 4 ಜನ ನಿರ್ದೇಶಕ ಸ್ಥಾನಕ್ಕೆ 8 ಜನ ಚುನಾವಣಾ ಕಣದಲ್ಲಿದ್ದರು. ಅವರಲ್ಲಿ ಶಿವಪುತ್ರ ಕರಣಿಕ, ಸಂತೋಷ ಸಲಗರ, ಸಾವಿತ್ರಿ ಪಾಟೀಲ ಹಾಗೂ 4ನೇ ಸ್ಥಾನಕ್ಕಾಗಿ ಸಮನಾಗಿ ಮತಗಳು ಪಡೆದ ಕಾರಣ ಮರು ಎಣಿಕೆ ಮಾಡಿದ ನಂತರವೂ ಸಮವಾಗಿ ಮತಗಳನ್ನು ಪಡೆದಿದ್ದರಿಂದ ಟಾಸ್ ಹಾರಿಸಲಾಯಿತು. ಅಬ್ದುಲ್ ಸಲೀಂ ಟಾಸ್ ಗೆದ್ದು ಗೆಲುವಿನ ದಡ ಸೇರಿದರು. ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಸ್ಥಾನಕ್ಕೆ ಗಫೂರ್ ಯುಸೂಫ್ ಜಾನಕಾ ಭಂಕೂರು ಆಯ್ಕೆಯಾದರು.
ಚುನಾವಣೆ ಪ್ರಕ್ರಿಯೆಯನ್ನು ಚುನಾವಣೆ ಅಧಿಕಾರಿಗಳಾದ ರಮೇಶ ತಳಂಗೆ ಮತ್ತು ಹಾಜಪ್ಪ ಬಿಳಾರ ನಡೆಸಿಕೊಟ್ಟರು.
ನಗರ ಠಾಣೆಯ ಎಎಸ್ಐ ಸಾತಲಿಂಗಪ್ಪ ಸಾಗರ, ಶ್ರೀಕಾಂತ ನಾಯಕ, ಅಶೋಕ ಕಟ್ಟಿ ಮತ್ತು ಸಿಬ್ಬಂದಿ ದರೇಶ ಪ್ಯಾಟಿ, ಪುತ್ರಪ್ಪ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.