ADVERTISEMENT

ಆಸ್ಪತ್ರೆಯಲ್ಲಿ ರಾತ್ರಿ ಔಷಧ ಕೇಂದ್ರ ತೆರೆದಿಡಿ: ಮಹ್ಮದ್ ಇಬ್ರಾಹೀಂ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2026, 4:22 IST
Last Updated 5 ಫೆಬ್ರುವರಿ 2026, 4:22 IST
ಚಿತ್ತಾಪುರ ತಾಲ್ಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿಧೋದ್ದೇಶ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಅವರು ಈಚೆಗೆ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ಚಿತ್ತಾಪುರ ತಾಲ್ಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ವಿವಿಧೋದ್ದೇಶ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹಿಂ ಅವರು ಈಚೆಗೆ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ಚಿತ್ತಾಪುರ: ‘ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ರಾತ್ರಿ ಸಮಯದಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ಅನುಕೂಲ ಮಾಡಿಕೊಡಲು ರಾತ್ರಿ ಸಮಯದಲ್ಲಿಯೂ ಔಷಧ ವಿತರಣಾ ಕೇಂದ್ರ ತೆರೆದಿಡಬೇಕು’ ಎಂದು ತಾಲ್ಲೂಕು ದೈಹಿಕ ಮತ್ತು ಮಾನಸಿಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹ್ಮದ್ ಇಬ್ರಾಹೀಂ ಅವರು ಮನವಿ ಮಾಡಿದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗೆ ಈಚೆಗೆ ಮನವಿ ಪತ್ರ ಸಲ್ಲಿಸಿರುವ ಅವರು, ‘ರಾತ್ರಿ ಸಮಯದಲ್ಲಿ ಅಪಘಾತದಲ್ಲಿ ತೀವ್ರ ಗಾಯಗೊಂಡವರು ಆಸ್ಪತ್ರೆಗೆ ಬಂದಾಗ ಔಷಧ ಸಮಸ್ಯೆ ಕಾಡುತ್ತಿದೆ. ರಾತ್ರಿ ಸಮಯದಲ್ಲಿ ಔಷಧ ವಿತರಣಾ ಕೇಂದ್ರ ತೆರೆದಿಡುವುದರಿಂದ ರೋಗಿಗಳಿಗೆ ತುಂಬಾ ಅನುಕೂಲವಾಗುತ್ತದೆ. ಆಸ್ಪತ್ರೆಯಲ್ಲಿ ಪಾಳಿಯಂತೆ ಕರ್ತವ್ಯ ನಿರ್ವಹಿಸುವ ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಯ ದೈನಂದಿನ ಮಾಹಿತಿಯನ್ನು ಫಲಕದಲ್ಲಿ ಹಾಕಬೇಕು’ ಎಂದು ಹೇಳಿದರು.

ಬಾಣಂತಿಯರು ಕುಟುಂಬ ಕಲ್ಯಾಣ ಯೋಜನೆಯಡಿ ಶಸ್ತ್ರ ಚಿಕಿತ್ಸೆಗಾಗಿ, ತಪಾಸಣೆಗೆ ಆಸ್ಪತ್ರೆಗೆ ಆಗಮಿಸಿದರೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಸೇವೆ ಒದಗಿಸಬೇಕು. ಮಹಿಳೆಯರ ಚಿಕಿತ್ಸೆಗಾಗಿ ಎಂಬಿಬಿಎಸ್ ಪದವೀಧರ ಮಹಿಳಾ ವೈದ್ಯರನ್ನು ಮತ್ತು ಅರವಳಿಕೆ ತಜ್ಞರನ್ನು ನಿಯೋಜನೆ ಮಾಡಬೇಕು ಎಂದು ಮನವಿ ಪತ್ರದ ಮೂಲಕ ಕೋರಿದರು.

ADVERTISEMENT

ಈ ಸಂದರ್ಭದಲ್ಲಿ ರವೀಂದ್ರ ತೇಲ್ಕರ್, ರಾಮು ರಾಠೋಡ, ಚಂದ್ರಶೇಖರ ಕಾಶಿ, ಅಂಬಾದಾಸ ಟೇಲರ್, ಮೊಗಲಪ್ಪ ಕುಂಬಾರ, ಮಹೆಬೂಬ್ ಟೇಲರ್ ಅವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.